ಮೈಸೂರು:ಒಂದೂವರೆ ಲಕ್ಷ ಸಂಬಳ ಕೊಟ್ಟರೂ ಡಾಕ್ಟರ್ ಸಿಗ್ತಿಲ್ಲ. 50 ಸಾವಿರ ಕೊಟ್ಟರೂ ನರ್ಸ್ ಸಿಗುತ್ತಿಲ್ಲ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಕರ್ನಾಟಕ ಸರ್ಕಾರ ಮೆಡಿಕಲ್ ಕಾಲೇಜು ಶುರು ಮಾಡಿದೆ. ಇಲ್ಲಿ ಶಿಕ್ಷಣ ಪಡೀತಾರೆ ವಿದೇಶದಲ್ಲಿ ಕೆಲಸ ಮಾಡಲು ಹೋಗ್ತಾರೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಬೇಸರ ವ್ಯಕ್ತಪಡಿಸಿದ್ದಾರೆ.
ಸರ್ಕಾರಿ ಕಾಲೇಜಿನಲ್ಲಿ ಶಿಕ್ಷಣ ಪಡೆಯುವಂತಹ ವಿದ್ಯಾರ್ಥಿಗಳು ಶಿಕ್ಷಣದ ಬಳಿಕ 5 ವರ್ಷಗಳ ಕಾಲ ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ಮಾಡಬೇಕು. ಈ ರೀತಿ ನಿಯಮ ಮಾಡುವಂತೆ ಮುಖ್ಯಮಂತ್ರಿಗಳ ಗಮನ ಸೆಳೆದಿರುವುದಾಗಿ ಸಚಿವರು ತಿಳಿಸಿದರು.
ಇನ್ನು, ಕೋವಿಡ್ ಸಂಬಂಧಟಾಸ್ಕ್ ಫೋರ್ಸ್ ಸಮಿತಿ ಮಾಡಿ ಚರ್ಚಿಸಲಾಗಿದೆ. ಇನ್ನೂ ಎರಡು-ಮೂರು ಬಾರಿ ಸಭೆ ಮಾಡಲಾಗುವುದು. ಮಕ್ಕಳ ಆಸ್ಪತ್ರೆ ತೆರೆಯುವುದು ಮತ್ತು ಅಗತ್ಯ ಔಷಧೋಪಚಾರ, ಯಂತ್ರೋಪಕರಣಗಳು ಬೇಕಾಗುತ್ತದೆ. ಸರ್ಕಾರದ ಮಟ್ಟದಲ್ಲಿ ಏನು ಮುಂಜಾಗ್ರತೆ ತೆಗೆದುಕೊಳ್ಳಬಹುದು ಎಂಬುದನ್ನು ಇನ್ನು ಎರಡು-ಮೂರು ಸಲ ಚರ್ಚೆ ಬಳಿಕ ತೀರ್ಮಾನ ಮಾಡಲಾಗುವುದು ಎಂದರು.