ಮೈಸೂರು : ತಿ. ನರಸೀಪುರ ತಾಲೂಕಿನ ಐತಿಹಾಸಿಕ ಪಂಚಲಿಂಗ ದರ್ಶನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ವಿಧ್ಯುಕ್ತ ಚಾಲನೆ ನೀಡಿದರು. ತಲಕಾಡಿನ ವೈದ್ಯನಾಥೇಶ್ವರ ದೇವಾಲಯದಲ್ಲಿ ಧಾರ್ಮಿಕ ಪೂಜಾ ಕೈಂಕರ್ಯಕ್ಕೆ ಸಚಿವರು ಚಾಲನೆ ಸಿಕ್ಕಿತು.
ಇಂದಿನಿಂದ 10 ದಿನಗಳ ಕಾಲ ಪಂಚಲಿಂಗ ದರ್ಶನ ಪಡೆಯಬಹುದು. ಇಂದು ಅಂಕುರಾರ್ಪಪಣೆ, ನವಕಳಶ ಸ್ಥಾಪನೆ ಮಾಡಲಾಯಿತು. ನಾಳೆಯಿಂದ ಧ್ವಜಾರೋಹಣ ರಕ್ಷಾ ಬಂಧನ, ಪುಷ್ಪ ಮಂಟಪರೋಹಣ, ಅಶ್ವಾರೋಹಣ ಸೇರಿದಂತೆ ವಿವಿಧ ಪೂಜಾ ಕೈಂಕರ್ಯ ಜರುಗಲಿದೆ.