ಮೈಸೂರು :ಸಿದ್ದರಾಮಯ್ಯ ಅವರು ಯಾವುದೇ ಪಕ್ಷದಲ್ಲಿ ಇರಲಿ ಅವರು ನಮ್ಮ ನಾಯಕರು ಎಂದು ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಹೇಳಿದರು.
ಸಿದ್ದರಾಮಯ್ಯ ಎಂದಿಗೂ ನಮ್ಮ ನಾಯಕರು : ಸಹಕಾರ ಸಚಿವ ಎಸ್ ಟಿ ಸೋಮಶೇಖರ್ - ಕಾಂಗ್ರೆಸ್ ಪಕ್ಷ ಬಿಟ್ಟ ಮೇಲೆ ಸಿದ್ದರಾಮಯ್ಯ
ಕಾಂಗ್ರೆಸ್ ಪಕ್ಷ ಬಿಟ್ಟ ಮೇಲೆ ಸಿದ್ದರಾಮಯ್ಯ ಹಾಗೂ ನಾನು ಇದೇ ಮೊದಲ ಬಾರಿಗೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ತುಂಬ ಖುಷಿಯಾಗಿದೆ. ಕಾರ್ಯಕ್ರಮದಲ್ಲಿ ನಾನು ಜಾಸ್ತಿ ಮಾತನಾಡಿಲ್ಲ, ನೀವೇ ಮಾತನಾಡಿ ಅಂದೆ, ಅದಕ್ಕೆ ಅವರು ನೀ ತುಂಬ ಕಿಲಾಡಿ ಇದ್ಯಾ ಎಂದು ಹಾಸ್ಯ ಮಾಡಿದರು..
ಸಚಿವ ಸೋಮಶೇಖರ್
ಸುತ್ತೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಬಿಟ್ಟ ಮೇಲೆ ಸಿದ್ದರಾಮಯ್ಯ ಹಾಗೂ ನಾನು ಇದೇ ಮೊದಲ ಬಾರಿಗೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ತುಂಬ ಖುಷಿಯಾಗಿದೆ. ಕಾರ್ಯಕ್ರಮದಲ್ಲಿ ನಾನು ಜಾಸ್ತಿ ಮಾತನಾಡಿಲ್ಲ, ನೀವೇ ಮಾತನಾಡಿ ಅಂದೆ, ಅದಕ್ಕೆ ಅವರು ನೀ ತುಂಬ ಕಿಲಾಡಿ ಇದ್ಯಾ ಎಂದು ಹಾಸ್ಯ ಮಾಡಿದರು ಎಂದರು.
ಎರಡು ಲೀಗಲ್ ಕೇಸ್ ಹೇಳಿದ್ದಾರೆ, ಅದನ್ನು ಅವರ ಗಮನಕ್ಕೆ ತಂದು ಮಾಡುತ್ತೇನೆ. ಸಿದ್ದರಾಮಯ್ಯ ಅವರು ಎಂದಿಗೂ ನಮ್ಮ ನಾಯಕರು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಎಸ್ ಟಿ ಸೋಮಶೇಖರ್ ಹೇಳಿದರು.