ಕರ್ನಾಟಕ

karnataka

ETV Bharat / state

ಹಾಸಿಗೆ ನೀಡಲು ಸಹಕರಿಸದ ಕೆಲವು ಆಸ್ಪತ್ರೆಗಳಿಗೆ ನೋಟಿಸ್ ನೀಡಲು ಸೂಚನೆ: ಸಚಿವ ಸೋಮಶೇಖರ್

ಒಬ್ಬರು ಕಂದಾಯ ಇಲಾಖೆ ಅಧಿಕಾರಿ, ಪೊಲೀಸ್ ಅಧಿಕಾರಿ ಹಾಗೂ ವೈದ್ಯರನ್ನು ಒಳಗೊಂಡ ತಂಡ ಎಲ್ಲಾ 34 ಆಸ್ಪತ್ರೆಗಳಿಗೆ ಭೇಟಿ ನೀಡಿ, ಶೇ.50 ರಷ್ಟು ಹಾಸಿಗೆಯನ್ನು ನೀಡುವ ಆದೇಶ ಪಾಲಿಸುತ್ತಿದ್ದಾರಾ ಎಂಬುದರ ಬಗ್ಗೆ ಪರಿಶೀಲನೆ ಮಾಡಬೇಕು ಎಂದು ಜಿಲ್ಲಾ ಪಂಚಾಯತ್​ನಲ್ಲಿ ನಡೆದ ಕೋವಿಡ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ಹೇಳಿದರು.

minister st somashekar
ಸಚಿವ ಸೋಮಶೇಖರ್

By

Published : May 11, 2021, 10:44 PM IST

ಮೈಸೂರು:ಕೋವಿಡ್ ಚಿಕಿತ್ಸೆಗೆ ಶೇ.50 ರಷ್ಟು ಬೆಡ್ ನೀಡಬೇಕಾಗಿರುವ 34 ಖಾಸಗಿ ಆಸ್ಪತ್ರೆಗಳಿಗೆ ಅಧಿಕಾರಿಗಳ ತಂಡ ಖುದ್ದು ಭೇಟಿ ನೀಡಿ, ಲಭ್ಯವಿರುವ ಹಾಸಿಗೆ ಸಾಮರ್ಥ್ಯದ ನಿಖರವಾದ ವಿವರ ನೀಡುವಂತೆ ಸಚಿವ ಎಸ್‌‌.ಟಿ. ಸೋಮಶೇಖರ್ ಸೂಚನೆ ನೀಡಿದರು.

ಸಚಿವ ಸೋಮಶೇಖರ್

ಓದಿ: ಆಮ್ಲಜನಕ ಕೊರತೆ: ಗೋವಾ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ 26 ಜನರು ಸಾವು

ಒಬ್ಬರು ಕಂದಾಯ ಇಲಾಖೆ ಅಧಿಕಾರಿ, ಪೊಲೀಸ್ ಅಧಿಕಾರಿ ಹಾಗೂ ವೈದ್ಯರನ್ನು ಒಳಗೊಂಡ ತಂಡ ಎಲ್ಲಾ 34 ಆಸ್ಪತ್ರೆಗಳಿಗೆ ಭೇಟಿ ನೀಡಿ, ಶೇ.50 ರಷ್ಟು ಹಾಸಿಗೆಯನ್ನು ನೀಡುವ ಆದೇಶ ಪಾಲಿಸುತ್ತಿದ್ದಾರಾ ಪರಿಶೀಲನೆ ಮಾಡಬೇಕು ಎಂದು ಜಿಲ್ಲಾ ಪಂಚಾಯತ್​ನಲ್ಲಿ ನಡೆದ ಕೋವಿಡ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ಹೇಳಿದರು.

ಹಲವು ಆಸ್ಪತ್ರೆಗಳು ಕೋವಿಡ್ ಚಿಕಿತ್ಸೆಗೆ ಉತ್ತಮ ಸ್ಪಂದನೆ ನೀಡುತ್ತಿದ್ದು, ಅವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ಸಹಕಾರ ನೀಡದಿರುವ ಅಸ್ಪತ್ರೆಗಳಿಗೆ ನೋಟಿಸ್​ ನೀಡಬೇಕು ಎಂದು ಹೇಳಿದರು. ಜೆ.ಎಸ್.ಎಸ್. ಆಸ್ಪತ್ರೆಯಲ್ಲಿ 300 ಆಮ್ಲಜನಕಯುಕ್ತ ಹಾಸಿಗೆಗಳನ್ನು ನೀಡಲು ಒಪ್ಪಿದ ಸುತ್ತೂರು ಶ್ರೀಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಧನ್ಯವಾದಗಳನ್ನು ಸಲ್ಲಿಸಿದ್ದಾರೆ ಎಂದು ಸಭೆಯಲ್ಲಿ ತಿಳಿಸಿದರು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ನಡೆಯುತ್ತಿರುವ ತುಳಸಿದಾಸ್ ಆಸ್ಪತ್ರೆ, ಬಿಡಿ ಕಾರ್ಮಿಕರ ಕಾಲೋನಿಯ ಆಸ್ಪತ್ರೆ ಹಾಗೂ ಇತ್ತೀಚೆಗೆ ಲೋಕಾರ್ಪಣೆಗೊಂಡ ಸೂಪರ್ ಸ್ಪೆಷಲಿಟಿ ಆಸ್ಪತ್ರೆಗಳಲ್ಲಿ ಆಮ್ಲಜನಕಯುಕ್ತ ಹಾಸಿಗೆ ಸಾಮರ್ಥ್ಯವನ್ನು ಹೆಚ್ಚಿಸಿದರೆ ಸಮಸ್ಯೆ ನಿವಾರಿಸಬಹುದು ಎಂದರು. ಕೆ.ಆರ್.ಆಸ್ಪತ್ರೆಯಲ್ಲಿ ರೋಗಿಯ ಪಾಲಕರು (ಅಟೆಂಡರ್) ಹೆಚ್ಚಿನ ಸಂಖ್ಯೆಯಲ್ಲಿ ತುಂಬಿಕೊಳ್ಳುತ್ತಿದ್ದಾರೆ. ಇದರಿಂದ ಕೋವಿಡ್ ಪ್ರಕರಣಗಳು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಕೋವಿಡ್ ರೋಗಿಗೆ ಅಟೆಂಡರ್ ಬಾರದಂತೆ ನೋಡಿಕೊಂಡರೆ ಸೋಂಕು ಹರಡುವುದು ತಪ್ಪುತ್ತದೆ ಎಂದು ಹೇಳಿದರು.

ವಾರ್ ರೂಂ ಗೆ ಮೈಸೂರು ಜಿಲ್ಲೆಯವರಲ್ಲದೆ ಅಕ್ಕಪಕ್ಕದ ಜಿಲ್ಲೆಯವರು ಸಹ ಕರೆ ಮಾಡುತ್ತಿದ್ದು, ಇದರಿಂದ ಸಾಮಾನ್ಯವಾಗಿ ಒತ್ತಡ ಉಂಟಾಗುತ್ತಿದೆ. ಅದಕ್ಕಾಗಿ ಹೆಚ್ಚಿನ‌ ಲೈನ್ ಗಳನ್ನು ತೆರೆಯಲು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಸಂಸದ ಪ್ರತಾಪ್ ಸಿಂಹ, ಶಾಸಕರಾದ ತನ್ವೀರ್ ಸೇಠ್, ಎಲ್. ನಾಗೇಂದ್ರ, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ನಿಗಮ ಮಂಡಳಿ ಅಧ್ಯಕ್ಷರು ಮತ್ತಿತrರು ಉಪಸ್ಥಿತರಿದ್ದರು.

ABOUT THE AUTHOR

...view details