ಕರ್ನಾಟಕ

karnataka

By

Published : Mar 2, 2022, 3:28 PM IST

Updated : Mar 2, 2022, 3:51 PM IST

ETV Bharat / state

ಉಕ್ರೇನ್​​​ನಲ್ಲಿ‌ರುವ ಮೈಸೂರು ವಿದ್ಯಾರ್ಥಿಗಳ ಮಾಹಿತಿ ಸಂಗ್ರಹ: ಸಚಿವ ಎಸ್.ಟಿ.ಸೋಮಶೇಖರ್

ಉಕ್ರೇನ್​​ನಲ್ಲಿ ಮೈಸೂರಿನ ಎಷ್ಟು ವಿದ್ಯಾರ್ಥಿಗಳು ಸಿಲುಕಿದ್ದಾರೆ ಎಂದು ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್​​ರಿಂದ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಎಸ್​.ಟಿ.ಸೋಮಶೇಖರ್ ಹೇಳಿದರು.

ಎಸ್​ ಟಿ ಸೋಮಶೇಖರ್
ಎಸ್​ ಟಿ ಸೋಮಶೇಖರ್

ಮೈಸೂರು: ಉಕ್ರೇನ್​​​​ನಲ್ಲಿ ಸಿಲುಕಿರುವ ಜಿಲ್ಲೆಯ ವಿದ್ಯಾರ್ಥಿಗಳ ಮಾಹಿತಿ ಕಲೆ ಹಾಕುತ್ತಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.


ಸಚಿವರು ನಗರದ ಮೃಗಾಲಯಕ್ಕೆ ಹೊರಭಾಗದ ಪಾರ್ಕಿಂಗ್ ಸ್ಥಳದಿಂದ ಮೃಗಾಲಯದೊಳಗಿನ ಟಿಕೆಟ್ ಕೌಟರ್‌ವರೆಗೂ ನಿರ್ಮಾಣವಾಗಿರುವ ಅಂಡರ್‌ಪಾಸ್​ ಉದ್ಘಾಟನೆ ಮಾಡಿದರು. ನಂತರ ಮಾತನಾಡುತ್ತಾ, ಮೃಗಾಲಯದ ಮುಂಭಾಗದ ರಸ್ತೆ ದಾಟಲು ಪ್ರವಾಸಿಗರಿಗೆ ತೊಂದರೆಯಾದ ಹಿನ್ನಲೆಯಲ್ಲಿ ಈ ಸುರಂಗ ಮಾರ್ಗ ನಿರ್ಮಾಣ ಮಾಡಲಾಗಿದೆ ಎಂದರು.

ಇದನ್ನೂ ಓದಿ : ನವೀನ್ ಪಾರ್ಥಿವ ಶರೀರ ತರಲು ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ: ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ

ಉಕ್ರೇನ್​​ನಲ್ಲಿರುವ ಮೈಸೂರು ವಿದ್ಯಾರ್ಥಿಗಳ ಮಾಹಿತಿಯನ್ನು ಕಲೆ ಹಾಕಲಾಗುತ್ತಿದ್ದು, ಎಷ್ಟು ವಿದ್ಯಾರ್ಥಿಗಳು ಸಿಲುಕಿದ್ದಾರೆ ಎಂದು ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್​​ರಿಂದ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವರು ತಿಳಿಸಿದರು.

Last Updated : Mar 2, 2022, 3:51 PM IST

For All Latest Updates

TAGGED:

ABOUT THE AUTHOR

...view details