ಕರ್ನಾಟಕ

karnataka

ETV Bharat / state

ಜಿಲ್ಲಾಧಿಕಾರಿಯನ್ನು ಕೈಬಿಟ್ಟು ಕೋವಿಡ್‌ ತಡೆಗೆ ಸಮಿತಿ ರಚಿಸಿದ ಸಚಿವ ಎಸ್‌.ಟಿ ಸೋಮಶೇಖರ್ - formation of the Committee for the Control of the Covid 3rd Wave

ಮೈಸೂರಿನಲ್ಲಿ ಸಂಭವನೀಯ ಕೋವಿಡ್​ 3ನೇ ಅಲೆಯನ್ನು ನಿಭಾಯಿಸಲು ಮತ್ತು ಮುಂಜಾಗ್ರತೆಯಾಗಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಸಂಸದ ಪ್ರತಾಪ್ ಸಿಂಹ ಅವರ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯಿಂದ ಜಿಲ್ಲಾಧಿಕಾರಿಯನ್ನು ಕೈಬಿಡಲಾಗಿದೆ.

Mysore
ಕೋವಿಡ್​ 3ನೇ ಅಲೆ ನಿಯಂತ್ರಣಕ್ಕೆ ಮುಂಜಾಗ್ರತಾ ಸಮಿತಿ ರಚನೆ

By

Published : May 24, 2021, 12:55 PM IST

ಮೈಸೂರು:ಕೋವಿಡ್ ಸಂಭವನೀಯ 3ನೇ ಅಲೆಯ ಮುಂಜಾಗ್ರತಾ ಸುರಕ್ಷತಾ ಕ್ರಮಕ್ಕೆ ವಿಶೇಷ ಸಮಿತಿ ರಚಿಸಲಾಗಿದ್ದು, ಆ ಸಮಿತಿಯಲ್ಲಿ ಜಿಲ್ಲಾಧಿಕಾರಿ ರೋಹಿಣಿ‌ ಸಿಂಧೂರಿ ಹೆಸರನ್ನು ಕೈಬಿಡಲಾಗಿದೆ.

ಕೊರೊನಾ 2ನೇ ಅಲೆಯ ನಂತರ ಬರಲಿದೆ ಎನ್ನಲಾದ ಸಂಭವನೀಯ 3ನೇ ಅಲೆಯನ್ನು ನಿಭಾಯಿಸಲು ಹಾಗೂ ಮುಂಜಾಗ್ರತೆಯಾಗಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಸಂಸದ ಪ್ರತಾಪ್ ಸಿಂಹ ಅವರ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಸಮಿತಿ ರಚಿಸಲಾಗಿದೆ. ಈ ಸಮಿತಿಯಲ್ಲಿ ಮೈಸೂರು ನಗರ ಪಾಲಿಕೆಯ ಆಯುಕ್ತೆ ಶಿಲ್ಪನಾಗ್, ಚಲುವಾಂಬ ಮಕ್ಕಳ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ. ಸುಧಾ, ವೆಂಟಿಲೇಟರ್ ತಯಾರಿಸುವ ಸ್ಕ್ಯಾನ್ರೇ ಕಂಪನಿಯ ಮುಖ್ಯಸ್ಥ ವಿಶ್ವಪ್ರಸಾದ್ ಆಳ್ವಾ ಹಾಗೂ ಮಕ್ಕಳ ತಜ್ಞ ವೈದ್ಯರಿದ್ದಾರೆ‌.

ಸಂಭವನೀಯ ಕೋವಿಡ್ 3ನೇ ಅಲೆಗೆ ಸಂಬಂಧಿಸಿದಂತೆ ಮುಂಜಾಗ್ರತೆಯಾಗಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಸಮಿತಿಗೆ ತಿಳಿಸಲಾಗಿದೆ. ಈ ಬಗ್ಗೆ ಒಂದು ವಾರದ ಒಳಗಾಗಿ ವರದಿ ನೀಡಲು ಸೂಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.

ಇದನ್ನೂ ಓದಿ:ಹೊನ್ನನಾಯಕನಹಳ್ಳಿ ಕೋವಿಡ್ ಕೇರ್​ ಸೆಂಟರ್​ನಲ್ಲಿ ಸೋಂಕಿತರಿಂದ ಪ್ರತಿಭಟನೆ

ABOUT THE AUTHOR

...view details