ಮೈಸೂರು: ಮೈಸೂರು- ಚಾಮರಾಜನಗರದ ಜೆಡಿಎಸ್ ಅಭ್ಯರ್ಥಿ ಕಿಡ್ನಿ ಮಾರಾಟದಲ್ಲಿ ನಂಬರ್ ಒನ್ ಎಂದು ಅಭ್ಯರ್ಥಿ ಸಿ.ಎನ್.ಮಂಜೇಗೌಡ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಗಂಭೀರ ಆರೋಪ ಮಾಡಿದ್ದಾರೆ.
ಜೆಡಿಎಸ್ ಅಭ್ಯರ್ಥಿ ಕಿಡ್ನಿ ಮಾರಾಟದಲ್ಲಿ ನಂಬರ್ 1: ಸಚಿವ ಎಸ್.ಟಿ. ಸೋಮಶೇಖರ್ ಗಂಭೀರ ಆರೋಪ - mysore
ಜೆಡಿಎಸ್ ಅಭ್ಯರ್ಥಿ ಕಿಡ್ನಿ ಮಾರಾಟದಲ್ಲಿ ನಂಬರ್ ಒನ್ ಎಂದು ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಸಿ.ಎನ್.ಮಂಜೇಗೌಡ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ನಗರದ ರಮಾಗೋವಿಂದ ರಂಗಮಂದಿರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಈ ರೀತಿಯ ಹೇಳಿಕೆ ನೀಡಿರುವ ಸಚಿವ ಎಸ್.ಟಿ. ಸೋಮಶೇಖರ್ ಅವರು, ಜೆಡಿಎಸ್ ಅಭ್ಯರ್ಥಿ ಒಂದೇ ಸೈಟನ್ನು ನಾಲ್ಕು ಜನರಿಗೆ ಮಾರಾಟ ಮಾಡುವ ಇತಿಹಾಸ ಪುರುಷರಾಗಿದ್ದಾರೆ. ಇಂತಹ ಕೇಸ್ ಇರುವ ಜೆಡಿಎಸ್ ಅಭ್ಯರ್ಥಿಗಳು ಮೈಸೂರಿನಲ್ಲಿ ಬಹಳ ಇದ್ದಾರೆ. ಕಿಡ್ನಿ ಮಾರುವ ಅಭ್ಯರ್ಥಿಯನ್ನು ವಿಧಾನ ಪರಿಷತ್ ಸದಸ್ಯನಾಗಿ ಮಾಡಿದರೆ ಮೈಸೂರು - ಚಾಮರಾಜನಗರ ಜನರಿಗೆ ಮಾಡಿದ ಅವಮಾನ ಎಂದಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಎಲ್ಲಾ ಕಡೆ ರೌಂಡ್ ಹಾಕುವಷ್ಟರಲ್ಲಿ ಚುನಾವಣೆ ಮುಗಿಯಲಿದೆ ಎಂದ ಸಚಿವರು, ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಅವರು ಬಿಜೆಪಿ ಅಭ್ಯರ್ಥಿಗೆ ಮತ ನೀಡುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು.