ಕರ್ನಾಟಕ

karnataka

ETV Bharat / state

ಅಮೆರಿಕಾದಲ್ಲಿ ಗುಂಡೇಟಿಗೆ ಯುವಕ ಬಲಿ.. ಕುಟುಂಬಕ್ಕೆ ಸಚಿವ ಶ್ರೀರಾಮುಲು ಸಾಂತ್ವನ.. - ಅಮೇರಿಕಾದ ಕ್ಯಾಲಿಫೋರ್ನಿಯಾದ ಪ್ರದೇಶ

ಅಮೆರಿಕಾದಲ್ಲಿ ಅಪರಿಚಿತನ ಗುಂಡೇಟಿಗೆ ಬಲಿಯಾದ ಮೈಸೂರಿನ ಯುವಕನ ಕುಟುಂಬಕ್ಕೆ ಸಚಿವ ಶ್ರೀರಾಮುಲು ಸಾಂತ್ವನ ಹೇಳಿ‌, ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದರು.

Minister Sriramulu visits the family of a young man who was shot dead in America
ಅಮೇರಿಕಾದಲ್ಲಿ ಗುಂಡಿಗೆ ಬಲಿಯಾದ ಯುವಕನ ಕುಟುಂಬಕ್ಕೆ ಸಚಿವ ಶ್ರೀರಾಮುಲು ಭೇಟಿ, ಸಾಂತ್ವನ

By

Published : Dec 1, 2019, 1:18 PM IST

ಮೈಸೂರು: ಅಮೆರಿಕಾದಲ್ಲಿ ಅಪರಿಚಿತನ ಗುಂಡೇಟಿಗೆ ಬಲಿಯಾದ ಮೈಸೂರು ಯುವಕನ ಕುಟುಂಬಕ್ಕೆ ಸಚಿವ ಶ್ರೀರಾಮುಲು ಸಾಂತ್ವನ ಹೇಳಿ‌, ಅಗತ್ಯ ನೆರವು ನೀಡುವ ಭರವಸೆ ನೀಡಿದರು.

ಮೃತನ ಕುಟುಂಬಕ್ಕೆ ಸಚಿವ ಶ್ರೀರಾಮುಲು ಸಾಂತ್ವನ..

ಅಮೆರಿಕಾದ ಕ್ಯಾಲಿಫೋರ್ನಿಯಾದ ಪ್ರದೇಶವೊಂದರಲ್ಲಿ ಅಪರಿಚಿತನ ಗುಂಡಿಗೆ ಬಲಿಯಾದ ವಿದ್ಯಾರ್ಥಿ ಕುಟುಂಬ ಮೈಸೂರಿನಲ್ಲಿದ್ದು, ಕುಟುಂಬಕ್ಕೆ ಸಚಿವ ಶ್ರೀರಾಮುಲು ಭೇಟಿ ನೀಡಿ ಸಾಂತ್ವನ ಹೇಳಿದರು. ಈ ವೇಳೆ ಓದಿನ ಜತೆಗೆ ಬಿಡುವಿನ ಸಮಯದಲ್ಲಿ ಹೋಟೆಲ್ ಒಂದರಲ್ಲಿ ರಿಸಪ್ಷನಿಸ್ಟ್​ ಆಗಿ ಕೆಲಸ ಮಾಡುತ್ತಿದ್ದ ಅಭಿಷೇಕ್ ಭಟ್, ಆ ಹೋಟೆಲ್‌ನಲ್ಲಿನ ರೂಂನ ಗ್ರಾಹಕನಿಂದ ವೇಕೆಟ್ ಮಾಡಿಸಲು ಹೋದಾಗ, ಶೂಟೌಟ್ ಮಾಡಿದ್ದಾನೆ ಎಂದು ಅವರ ತಂದೆ ತಿಳಿಸಿದ್ದಾರೆ.

ಕುಟುಂಬದವರು ತಕ್ಷಣ ಅಮೆರಿಕಾಗೆ ಹೋಗಬೇಕಾಗಿರುವುದರಿಂದ ಕೇಂದ್ರ ಸಚಿವರು ಹಾಗೂ ಸಂಸದರ ಜೊತೆ ಮಾತನಾಡಿ ವ್ಯವಸ್ಥೆ ಮಾಡುವಂತೆ ನಾನು ಕೇಳಿಕೊಂಡಿದ್ದೇನೆ.‌ ಆ ದೇವರು ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿಕೊಳ್ಳುತ್ತೇನೆ ಎಂದು ಶ್ರೀರಾಮುಲು ಹೇಳಿದರು.

ABOUT THE AUTHOR

...view details