ಮೈಸೂರು : ಈ ಬಾರಿ ಸರಳ ಹಾಗೂ ಸಾಂಪ್ರದಾಯಿಕ ದಸರಾ ಆಚರಣೆಗೆ ಸರ್ಕಾರ 10 ಕೋಟಿ ಬಿಡುಗಡೆ ಮಾಡಿತ್ತು. ಅದರಲ್ಲಿ ಆದ ಖರ್ಚು ಎಷ್ಟು, ಉಳಿದ ಹಣವೆಷ್ಟು ಎಂಬುವುದರ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಸಂಪೂರ್ಣ ಮಾಹಿತಿ ನೀಡಿದರು.
ಸರಳಾ ದಸರಾಗೆ ಆದ ಖರ್ಚು ಎಷ್ಟು... ಉಳಿದ ಹಣವೆಷ್ಟು..? : ಸಂಪೂರ್ಣ ಲೆಕ್ಕ ಕೊಟ್ಟ ಸಚಿವ ಸೋಮಶೇಖರ್ - ದಸರಾ ಖರ್ಚು ವೆಚ್ಚದ ಬಗ್ಗೆ ಸಚಿವ ಸೋಮಶೇಖರ್ ಮಾಹಿತಿ
ಈ ಬಾರಿಯ ಸರಳ ದಸರಾ ಆಚರಣೆಗೆ ಸರ್ಕಾರ ಬಿಡುಗಡೆ ಮಾಡಿದ ಹಣವೆಷ್ಟು. ಅದರಲ್ಲಿ ಯಾವುದಕ್ಕೆ ಎಷ್ಟೆಷ್ಟು ಖರ್ಚಾಗಿದೆ ಎಂಬುವುದರ ಬಗ್ಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಮಾಹಿತಿ ನೀಡಿದರು.
ಈ ಬಾರಿ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸರ್ಕಾರದಿಂದ 10 ಕೋಟಿ ರೂಪಾಯಿಯನ್ನು ಜಿಲ್ಲಾಧಿಕಾರಿಯವರ ಖಾತೆಗೆ ಜಮಾ ಮಾಡಲಾಗಿತ್ತು. ಆ ಪೈಕಿ, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ದಸರಾಗೆ 50 ಲಕ್ಷ ರೂ., ಚಾಮರಾಜನಗರ ದಸರಾಗೆ 36 ಲಕ್ಷ ರೂ. ನೀಡಲಾಗಿತ್ತು. ಉಳಿದ 9.14 ಕೋಟಿಯಲ್ಲಿ ಮೈಸೂರು ದಸರಾಗೆ 2,05,83,167.00 ಖರ್ಚಾಗಿದೆ, 7,08,16,833.00 ಉಳಿದಿದೆ. ಅದು ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಇದೆ ಎಂದು ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು.
ಉಳಿದಂತೆ ದಸರಾ ಆಚರಣೆಗೆ ರಚಿಸಲಾಗಿದ್ದ 23 ಸಮಿತಿಗಳ ಖರ್ಚುಗಳ ಬಗ್ಗೆಯೂ ಮಾಹಿತಿ ನೀಡಿದರು. ಅವುಗಳು ಈ ರೀತಿಯಿದೆ.