ಮೈಸೂರು: ದುಷ್ಕರ್ಮಿಗಳು ಸುಟ್ಟು ಹಾಕಿದ ರಾಜೀವ್ ನಗರದ ಸೈಯದ್ ಇಸಾಕ್ ಅವರ ಗ್ರಂಥಾಲಯದ ಮರುಸ್ಥಾಪನೆಗಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ವೈಯಕ್ತಿಕವಾಗಿ 25 ಸಾವಿರ ರೂ. ಧನಸಹಾಯ ನೀಡಿದರು.
ಇದಲ್ಲದೆ ಸೈಯದ್ ಇಸಾಕ್ ಅವರ ಗ್ರಂಥಾಲಯ ಮತ್ತು ಭಾರತೀಯ ಜನತಾ ಪಕ್ಷದ ಕಚೇರಿಗೆ ರಾಮಾಯಣ, ಮಹಾಭಾರತ, ಬೈಬಲ್ ಮತ್ತು ಕುರಾನ್ ಪ್ರತಿಗಳನ್ನು ನೀಡಿದರು.
ಓದಿ : ಜನ ವಿರೋಧಿ ಚಟುವಟಿಕೆಗೆ ನನ್ನ ಸಮ್ಮತಿ ಇಲ್ಲ: ಸಚಿವ ಎಸ್.ಟಿ.ಸೋಮಶೇಖರ್
ಆರ್ಥಿಕ ನೆರವು ಮತ್ತು ಗ್ರಂಥಗಳನ್ನು ಸ್ವೀಕರಿಸಿದ ಬಳಿಕ ಮಾತನಾಡಿದ ಸೈಯದ್ ಇಸಾಕ್, ಒಂದು ಗ್ರಂಥಾಲಯವು ನೂರು ದೇವಾಲಯಗಳಿಗೆ ಸಮಾನವಾಗಿದೆ. ಮಸೀದಿ, ದೇವಾಲಯ, ಚರ್ಚ್ಗಳು ನಿರ್ಮಾಣವಾದರೆ ಭಿಕ್ಷುಕರು ಹುಟ್ಟಿಕೊಳ್ಳುತ್ತಾರೆ. ಆದರೆ ಗ್ರಂಥಾಲಯ ನಿರ್ಮಾಣವಾದರೆ ಹಲವಾರು ವಿದ್ಯಾವಂತರು ಹುಟ್ಟಿಕೊಳ್ಳುತ್ತಾರೆ. ನೂರು ಜನರ ಸ್ನೇಹ ಬೆಳೆಸಿದರೂ ಒಂದು ದಿನ ಮೋಸ ಮಾಡುತ್ತಾರೆ. ಆದರೆ ಪುಸ್ತಕಗಳು ಎಂದಿಗೂ ಮೋಸ ಮಾಡುವುದಿಲ್ಲ ಎಂದರು.