ಕರ್ನಾಟಕ

karnataka

ETV Bharat / state

ನೆರೆ ಪೀಡಿತ ಪ್ರದೇಶಗಳಿಗೆ ಸಚಿವ ಸೋಮಣ್ಣ ಭೇಟಿ: ಸಂತ್ರಸ್ತರಿಂದ ಅಹವಾಲು ಸ್ವೀಕಾರ

ಮೈಸೂರಿನ ಹೆಚ್.ಡಿ.ಕೋಟೆ ತಾಲೂಕಿನ ನೆರೆ ಪೀಡಿತ ಪ್ರದೇಶಗಳಿಗೆ ವಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.

ನೆರೆ ಪೀಡಿತ ಪ್ರದೇಶಗಳಿಗೆ ಸಚಿವ ಸೋಮಣ್ಣ ಭೇಟಿ

By

Published : Sep 7, 2019, 11:00 PM IST

ಮೈಸೂರು:ಹೆಚ್.ಡಿ.ಕೋಟೆ ತಾಲೂಕಿನ ನೆರೆ ಪ್ರದೇಶ, ರಸ್ತೆ, ಮುರಿದು ಬಿದ್ದ ಸೇತುವೆಗಳನ್ನು ವಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಪರಿಶೀಲನೆ ನಡೆಸಿದ್ರು.

ಕಬಿನಿ ಜಲಾಶಯದ ಪ್ರವಾಹ ಪ್ರದೇಶಗಳಿಗೆ ಭೇಟಿ ನೀಡಿ ದಾರಿ ಮಧ್ಯದ ಗ್ರಾಮಗಳ ಜನರಿಂದ ಅಹವಾಲು ಸ್ವೀಕರಿಸಿದರು. ಹಾದನೂರು ಗ್ರಾಮ ಪಂಚಾಯಿತಿ ಸದಸ್ಯ ಪ್ರಕಾಶ್, ಎಸ್​​ಸಿ ಮತ್ತು ಎಸ್​​​ಟಿ ಸಮುದಾಯಗಳಿಗೆ ಮನೆ ಮಂಜೂರಾತಿ ಮಾಡಿಕೊಡುವಂತೆ ಮನವಿ ಪತ್ರ ಸಲ್ಲಿಸಿದರು. ಮನವಿ ಪತ್ರ ಪಡೆದು ಸಚಿವರು ಮಂಜೂರಾತಿಯ ಭರವಸೆ ನೀಡಿದರು.

ನೆರೆ ಪೀಡಿತ ಪ್ರದೇಶಗಳಿಗೆ ಸಚಿವ ಸೋಮಣ್ಣ ಭೇಟಿ

ಹೆಡಿಯಾಲ-ಬಡಗಲಪುರ ರಸ್ತೆಯ ಮಧ್ಯೆ ಸುಮಾರು ವರ್ಷಗಳ ಹಿಂದೆ ನಿರ್ಮಿಸಿದ್ದ ಬಂಡಿ ಸೇತುವೆ ಶಿಥಿಲಾವಸ್ಥೆಯಲ್ಲಿದೆ. ನುಗು ಜಲಾಶಯ ತುಂಬಿದ ಪರಿಣಾಮ ಸೇತುವೆ ಮುಳುಗಡೆಯಾಗಿ ಹಾನಿಯಾಗಿರುವುದನ್ನ ಪರಿಶೀಲಿಸಿದ ಸಚಿವರು, ಅದನ್ನು ಕೆಡವಿ ಶಾಶ್ವತ ಸೇತುವೆ ನಿರ್ಮಿಸುವಂತೆ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಕಿಶೋರ್ ಚಂದ್ರ ಅವರಿಗೆ ತಿಳಿಸಿದರು. ಸೇತುವೆ ಮರು ನಿರ್ಮಾಣಕ್ಕೆ 4 ಕೋಟಿ ಮನವಿ ಹಾಗೂ ದುರಸ್ತಿಗೆ 10 ಲಕ್ಷ ರೂ.ಗಳ ಮನವಿಯನ್ನು ಈಗಾಗಲೇ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ಸಚಿವರಿಗೆ ತಿಳಿಸಿದರು. ಹೆಚ್.ಡಿ.ಕೋಟೆ ಅಂಕನಾಥಪುರದ ಸೇತುವೆ ಕುಸಿದಿದ್ದು, ಸಂಚಾರ ಸಂಪೂರ್ಣವಾಗಿ ಕಡಿತಗೊಂಡಿದೆ. ಅದನ್ನು ಪರಿಶೀಲಿಸಿದ ಸಚಿವರು, ಸೇತುವೆ ಮತ್ತು ಅಂಕನಾಥಪುರ ರಸ್ತೆಯ ಕಾಮಗಾರಿಯನ್ನು ಶೀಘ್ರ ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ABOUT THE AUTHOR

...view details