ಮೈಸೂರು :ಎಪಿಎಂಸಿ ಮಾರುಕಟ್ಟೆಯಲ್ಲಿ ಕೊರೊನಾ ಸೋಂಕು ನಿವಾರಕ ಮಾರ್ಗವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಮರು ಉದ್ಘಾಟನೆ ಮಾಡಿದರು.
ಕೊರೊನಾ ಸೋಂಕು ನಿವಾರಕ ಸುರಂಗ ಮಾರ್ಗ ಉದ್ಘಾಟಿಸಿದ ಸಚಿವ ಎಸ್ ಟಿ ಸೋಮಶೇಖರ್ - ಮೈಸೂರು ಎಪಿಎಂಸಿ ಮಾರುಕಟ್ಟೆ
ಸಚಿವರು ಸಗಟು ತರಕಾರಿ ಮಾರುಕಟ್ಟೆಗೆ ಪ್ರವೇಶಿಸಿ ಅಲ್ಲಿ ರೈತರ, ವ್ಯಾಪಾರಸ್ಥರ ಹಾಗೂ ಲಾರಿ ಚಾಲಕರ ಸಮಸ್ಯೆಗಳನ್ನು ಆಲಿಸಿ ಮಾಹಿತಿ ಪಡೆದುಕೊಂಡರು.
ಕೊರೊನಾ ಸೋಂಕು ನಿವಾರಕ ಟನಲ್ ಉದ್ಘಾಟಿಸಿದ ಸಚಿವ ಎಸ್. ಟಿ ಸೋಮಶೇಖರ್
ಸಚಿವರು ಬರುವ ಹಿನ್ನೆಲೆ ಕಳೆದ 3 ದಿನಗಳಿಂದ ಮಾರುಕಟ್ಟೆಯ ದ್ವಾರದಲ್ಲಿ ಬಳಕೆಯಾಗುತ್ತಿದ್ದ ಕೊರೊನಾ ಸೋಂಕು ನಿವಾರಕ ಮಾರ್ಗವನ್ನ ಮತ್ತೆ ಟೇಪ್‌ಹಾಕಿ ಸಚಿವ ಎಸ್ ಟಿ ಸೋಮಶೇಖರ್ ಅವರಿಂದ ಮರು ಉದ್ಘಾಟನೆ ಮಾಡಿಸಲಾಯಿತು. ಈ ವೇಳೆ ಸ್ವತಃ ಸಚಿವರೇ ಉದ್ಘಾಟನೆ ಮಾಡಿ ಸುರಂಗ ಮಾರ್ಗದೊಳಗಡೆ ನಡೆದುಕೊಂಡು ಬಂದರು.
ಅನಂತರ ಸಚಿವರು ಸಗಟು ತರಕಾರಿ ಮಾರುಕಟ್ಟೆಗೆ ಪ್ರವೇಶಿಸಿ ಅಲ್ಲಿ ರೈತರ, ವ್ಯಾಪಾರಸ್ಥರ ಹಾಗೂ ಲಾರಿ ಚಾಲಕರ ಸಮಸ್ಯೆಗಳನ್ನು ಆಲಿಸಿ ಮಾಹಿತಿ ಪಡೆದುಕೊಂಡರು.