ಮೈಸೂರು: ನಂಜನಗೂಡು ತಾಲೂಕಿನ ಎಲಚಗೆರೆ, ಹುಣಸನಾಳು ಸೇರಿದಂತೆ ಇತರ ಗ್ರಾಮಗಳಿಗೆ ಕಂದಾಯ ಸಚಿವ ಆರ್.ಅಶೋಕ್ ಭೇಟಿ ನೀಡಿ ಮಳೆಯಿಂದಾಗಿ ಬಿದ್ದರುವ ಮನೆಗಳು ಮತ್ತು ಜಮೀನಿನಲ್ಲಿ ಬೆಳೆಗಳು ಹಾನಿಯಾಗಿರುವುದನ್ನು ಪರಿಶೀಲಿಸಿ, ಫಲಾನುಭವಿಗಳಿಗೆ ಚೆಕ್ ವಿತರಣೆ ಮಾಡಿದರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎನ್‌ಡಿಆರ್‌ಎಫ್ ನಿಯಮದ ಪ್ರಕಾರ ಎಷ್ಟು ಪರಿಹಾರ ಕೊಡಬೇಕು, ಅದಕ್ಕಿಂತ ಎರಡರಷ್ಟು ಪರಿಹಾರ ಕೊಡಬೇಕು ಎಂದು ಜಿಲ್ಲಾಧಿಕಾರಿ ಬಗಾದಿಗೌತಮ್ ಅವರಿಗೆ ತಿಳಿಸಿದ್ದೇನೆ ಎಂದು ಹೇಳಿದರು.
ಎನ್ ಡಿಆರ್‌ಎಫ್ ಪ್ರಕಾರ ಪರಿಹಾರಧನ 95 ಸಾವಿರ ಇದೆ. ಆದರೇ ನಾವು ನಮ್ಮ ಸರ್ಕಾರದಿಂದ 4 ಲಕ್ಷದವರೆಗೆ ಪರಿಹಾರಧನ ಕೊಟ್ಟಿದ್ದೇವೆ ಎಂದು ಹೇಳಿದರು. ಈಗಾಗಲೇ ನೆರೆ ಸಂತ್ರಸ್ತರಿಗೆ 300 ಕೋಟಿ ಹಣ ಬಿಡುಗಡೆ ಮಾಡಿದ್ದೇವೆ ಎಂದರು.
ನೆರೆ ಪ್ರದೇಶಗಳಿಗೆ ಸಚಿವ ಆರ್.ಅಶೋಕ ಭೇಟಿ ಇನ್ನೆರಡು ದಿನಗಳಲ್ಲಿ 500 ಕೋಟಿ ಹಣ ಮಂಜೂರು ಮಾಡಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇವೆ. ಇನ್ನೆರಡು ದಿನಗಳಲ್ಲಿ ಹಣ ಬಿಡುಗಡೆಯಾಗುತ್ತದೆ ಎಂದು ಹೇಳಿದರು. ವಿರೋಧ ಪಕ್ಷದವರೆಲ್ಲ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ನಾವು ನಮ್ಮ ಸರ್ಕಾರ, ರೈತರನ್ನು ಕೈಬಿಡೊಲ್ಲ, ನಮ್ಮ ಸರ್ಕಾರ ಮಾದರಿಯಾದ ಒಂದು ಪ್ಯಾಕೇಜನ್ನು ಬಿಡುಗಡೆ ಮಾಡಿದ್ದೇವೆ. ನಮ್ಮ ಸರ್ಕಾರ ರೈತರ ಪರವಾಗಿದೆ ಎಂದರು.
ಇದನ್ನೂ ಓದಿ:ನೆರೆ ಹಾನಿ ತುರ್ತು ಪರಿಹಾರ ಕಾರ್ಯಕ್ಕಾಗಿ 200 ಕೋಟಿ ರೂ. ಬಿಡುಗಡೆ