ಕರ್ನಾಟಕ

karnataka

ETV Bharat / state

ಕ್ರೀಡಾ ಹಾಸ್ಟೆಲ್​​ಗೆ ಸಚಿವ ನಾರಾಯಣಗೌಡ ದಿಢೀರ್​ ಭೇಟಿ : ಅಧಿಕಾರಿಗಳಿಗೆ ತರಾಟೆ - ಸಚಿವ ನಾರಾಯಣಗೌಡ ದಿಢೀರ್​ ಭೇಟಿ

ಕ್ರೀಡಾ ವಿದ್ಯಾರ್ಥಿಗಳಿಗೆ ಉತ್ತಮ ಕ್ರೀಡಾ ತರಬೇತಿ ನೀಡಬೇಕು. ಊಟ, ವಸತಿಯಲ್ಲಿಯೂ ಯಾವುದೇ ಕೊರತೆಯಾಗಬಾರದು. ಸರ್ಕಾರದಿಂದ ಎಲ್ಲ ರೀತಿಯ ನೆರವು ನೀಡಲು ಸಿದ್ದ. ನಿಮ್ಮಿಂದ ಉತ್ತಮ ಕೆಲಸ ಆಗಬೇಕು..

mysore
ಕ್ರೀಡಾ ಹಾಸ್ಟೆಲ್​​ಗೆ ಸಚಿವ ನಾರಾಯಣಗೌಡ ದಿಢೀರ್​ ಭೇಟಿ: ಅಧಿಕಾರಿಗಳಿಗೆ ತರಾಟೆ

By

Published : Feb 6, 2021, 7:39 PM IST

ಮೈಸೂರು :ನಗರದ ಕ್ರೀಡಾ ಹಾಸ್ಟೆಲ್​​ಗೆ ಯುವ ಸಬಲೀಕರಣ ಮತ್ತು ಕ್ರೀಡೆ ಇಲಾಖೆ ಸಚಿವ ಡಾ. ನಾರಾಯಣಗೌಡ ಅವರು ದಿಢೀರ್ ಭೇಟಿ ನೀಡಿ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡರು.

ಕ್ರೀಡಾ ಹಾಸ್ಟೆಲ್​​ಗೆ ಸಚಿವ ನಾರಾಯಣಗೌಡ ದಿಢೀರ್​ ಭೇಟಿ : ಅಧಿಕಾರಿಗಳಿಗೆ ತರಾಟೆ

ಹಾಸ್ಟೆಲ್​ನಲ್ಲಿ ಸ್ವಚ್ಛತೆ ಸರಿಯಾಗಿ ಇರಬೇಕು. ಕೆಲ ಸಿಬ್ಬಂದಿ ಗೈರಾಗಿದ್ದಾರೆ. ನಿತ್ಯವೂ ಹೀಗೆ ಮಾಡ್ತಿದ್ದಾರಾ? ಮನಸ್ಸಿಗೆ ಬಂದಂತೆ ಕೆಲಸ ಮಾಡಿದ್ರೆ ಸುಮ್ಮನಿರಲ್ಲ ಎಂದು ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡರು.

ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದ ಬಳಿ ಇರುವ ಕ್ರೀಡಾ ವಸತಿ ಶಾಲೆಗೆ ಭೇಟಿ ನೀಡಿದ ಸಚಿವರು, ಕೊಠಡಿಗಳಿಗೆ ತೆರಳಿ ವಿದ್ಯಾರ್ಥಿಗಳ ಜತೆ ಮಾತನಾಡಿ, ವ್ಯವಸ್ಥೆ ಬಗ್ಗೆ ಅವರಿಂದಲೇ ಮಾಹಿತಿ ಪಡೆದರು. ಊಟ ತಿಂಡಿ, ವ್ಯವಸ್ಥೆ ಜೊತೆಗೆ ಕ್ರೀಡಾ ತರಬೇತಿ ಬಗ್ಗೆಯೂ ವಿಚಾರಿಸಿದರು.

ಕ್ರೀಡಾ ವಿದ್ಯಾರ್ಥಿಗಳಿಗೆ ಉತ್ತಮ ಕ್ರೀಡಾ ತರಬೇತಿ ನೀಡಬೇಕು. ಊಟ, ವಸತಿಯಲ್ಲಿಯೂ ಯಾವುದೇ ಕೊರತೆಯಾಗಬಾರದು. ಸರ್ಕಾರದಿಂದ ಎಲ್ಲ ರೀತಿಯ ನೆರವು ನೀಡಲು ಸಿದ್ದ. ನಿಮ್ಮಿಂದ ಉತ್ತಮ ಕೆಲಸ ಆಗಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ABOUT THE AUTHOR

...view details