ಕರ್ನಾಟಕ

karnataka

ETV Bharat / state

ಸಿಎಂ ಬಸವರಾಜ ಬೊಮ್ಮಾಯಿ ಸಮನಾಗಿ ಖಾತೆ ಹಂಚಿದ್ದಾರೆ: ಸಚಿವ ನಿರಾಣಿ - ಮೈಸೂರಿನಲ್ಲಿ ಮುರುಗೇಶ್ ನಿರಾಣಿ ಹೇಳಿಕೆ

ಪಕ್ಷದ ಹಿರಿಯರು ಕೂಡ ಎಲ್ಲರ ಜೊತೆ ಮಾತನಾಡಿದ್ದಾರೆ. ಮುಂದಿನ 2023 ಚುನಾವಣೆಗೆ ಪಕ್ಷ ಮತ್ತೆ ಅಧಿಕಾರಕ್ಕೆ ಬರುತ್ತೆ ಎಂದು ಮುರುಗೇಶ್ ನಿರಾಣಿ ಹೇಳಿದ್ದಾರೆ.

ಮೈಸೂರಿನಲ್ಲಿ ಮುರುಗೇಶ್ ನಿರಾಣಿ ಹೇಳಿಕೆ
ಮೈಸೂರಿನಲ್ಲಿ ಮುರುಗೇಶ್ ನಿರಾಣಿ ಹೇಳಿಕೆ

By

Published : Aug 9, 2021, 2:27 PM IST

ಮೈಸೂರು:ಸಿಎಂ ಬಸವರಾಜ ಬೊಮ್ಮಾಯಿ‌ ಎಲ್ಲಾ ಪ್ರದೇಶಗಳಿಗೂ ಸಮಾನವಾಗಿ ಖಾತೆ ಹಂಚಿಕೆ ಮಾಡಿದ್ದಾರೆ. ಆದರೆ 70 ವರ್ಷ ಇತಿಹಾಸ ನೋಡಿದ್ರೆ ಖಾತೆ ಹಂಚಿಕೆ ಅಸಮಾಧಾನ ಸಹಜ ಎಂದು ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.

ಮೈಸೂರಿನಲ್ಲಿ ಮುರುಗೇಶ್ ನಿರಾಣಿ ಹೇಳಿಕೆ

ನಂಜನಗೂಡು ತಾಲೂಕಿನ ಸುತ್ತೂರು ಕ್ಷೇತ್ರಕ್ಕೆ ಭೇಟಿ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಕ್ಷದ ಹಿರಿಯರು ಕೂಡ ಎಲ್ಲರ ಜೊತೆ ಮಾತನಾಡಿದ್ದಾರೆ. ಮುಂದಿನ 2023 ಚುನಾವಣೆಗೆ ಪಕ್ಷ ಮತ್ತೆ ಅಧಿಕಾರಕ್ಕೆ ಬರುತ್ತೆ ಎಂದರು.

ಇದನ್ನೂ ಓದಿ : ಆನಂದ್ ​​ಸಿಂಗ್​​ರನ್ನು ಕರೆಸಿ ಮಾತನಾಡಿದ್ದೇನೆ, ಅವರು ಸಮಾಧಾನವಾಗಿದ್ದಾರೆ: ಸಿಎಂ ಬೊಮ್ಮಾಯಿ

ಸಿ.ಪಿ.ಯೋಗೇಶ್ವರ್ ದೆಹಲಿ ಭೇಟಿ ವಿಚಾರ ಮಾತನಾಡಿ, ವೈಯಕ್ತಿಕ ಕೆಲಸಕ್ಕೆ ಭೇಟಿ ಕೊಟ್ಟಿದ್ದಾರೆ. ನಾನು ಕೂಡ ನಾಳೆ ದೆಹಲಿಗೆ ಹೋಗ್ತೀನಿ. ಅವರ ಕೆಲಸಗಳಿಗೆ ಹೋಗಿ ಬರೋದು ಸಹಜ, ಕೋವಿಡ್ ವಿಚಾರದಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮ ವಹಿಸಿದೆ ಎಂದು ಹೇಳಿದರು.

ABOUT THE AUTHOR

...view details