ಕರ್ನಾಟಕ

karnataka

ETV Bharat / state

ಮಾನ್ಯಾ ಎಂಬ ಹೆಣ್ಣು ಹುಲಿ ದತ್ತು ಪಡೆದ ಸಚಿವ ಮುರುಗೇಶ್ ನಿರಾಣಿ

ಸಚಿವ ಮುರುಗೇಶ ನಿರಾಣಿ ಮಾನ್ಯಾ ಎಂಬ ಹುಲಿಯನ್ನು, 1 ವರ್ಷದ ಅವಧಿಗೆ ದತ್ತು ಪಡೆದಿದ್ದಾರೆ.

Minister Murugesh Nirani adopted a female tiger
ಹುಲಿಯನ್ನು ದತ್ತು ಪಡೆದ ಸಚಿವ ಮುರುಗೇಶ್ ನಿರಾಣಿ

By

Published : Jul 29, 2022, 5:52 PM IST

ಮೈಸೂರು:ವಿಶ್ವ ಹುಲಿ ದಿನಾಚರಣೆ ನಿಮಿತ್ತ ಬೃಹತ್ ಮತ್ತು ಮದ್ಯಮ ಕೈಗಾರಿಕಾ ಸಚಿವರಾದ ಮುರುಗೇಶ ನಿರಾಣಿ, ತಮ್ಮ ಮೊಮ್ಮಗ ಸಮರ್ಥ್ ಎಂ ವಿಜಯ ನಿರಾಣಿ ಹೆಸರಿನಲ್ಲಿ ಹುಲಿಯನ್ನು ದತ್ತು ಪಡೆದಿದ್ದಾರೆ. ಕರ್ನಾಟಕ ಮೃಗಾಲಯದ ಮಾನ್ಯಾ ಎಂಬ ಹೆಣ್ಣು ಹುಲಿಯನ್ನು 2 ಲಕ್ಷದ ರೂ. ದೇಣಿಗೆ ನೀಡಿ, 1 ವರ್ಷದ ಅವಧಿಗೆ ದತ್ತು ಪಡೆದಿದ್ದಾರೆ.

ಮೃಗಾಲಯ ಪ್ರಾಧಿಕಾರ ಅಧ್ಯಕ್ಷ ಶಿವಕುಮಾರ

ಇದೇ ಸಂದರ್ಭದಲ್ಲಿ ಮಾತನಾಡಿದ ಮೃಗಾಲಯ ಪ್ರಾಧಿಕಾರ ಅಧ್ಯಕ್ಷ ಶಿವಕುಮಾರ, ವಿಶ್ವ ಹುಲಿ ದಿನದಂದು ನಿರಾಣಿ ಕುಟುಂಬದವರು ಹುಲಿಯನ್ನು ದತ್ತು ಪಡೆದಿದ್ದಾರೆ. ಹಾಗಾಗಿ ಅವರನ್ನು ನಾನು ಅಭಿನಂದಿಸುತ್ತೇನೆ. ಇಂದು ಸಚಿವರಾದ ಮುರುಗೇಶ್ ನಿರಾಣಿ, 1ವರ್ಷದ ಅವಧಿಗೆ ದತ್ತು ಪಡೆದಿದ್ದಾರೆ.

ಮೃಗಾಲಯದ ಪ್ರಾಣಿಗಳನ್ನು ದತ್ತು ಪಡೆಯುವ ಮೂಲಕ ಪ್ರಾಣಿಗಳ ಸಂರಕ್ಷಣೆ ಹಾಗೂ ಮೃಗಾಲಯ ನಿರ್ವಹಣೆಗೆ ಕೈಜೋಡಿಸಿದ ಎಲ್ಲರಿಗೂ ಮೃಗಾಲಯ ಪ್ರಾಧಿಕಾರ ಅಭಿನಂದಿಸುತ್ತದೆ ಎಂದು ಅವರು ಹೇಳಿದರು.

ಇದನ್ನೂ ಓದಿ:ಹುಲಿಗಳು ಮನುಷ್ಯನ ಮೇಲೆ ದಾಳಿ ಮಾಡುವುದೇಕೆ?: ವನ್ಯಜೀವಿ ತಜ್ಞರು ಹೇಳೋದೇನು?

ABOUT THE AUTHOR

...view details