ಕರ್ನಾಟಕ

karnataka

ETV Bharat / state

ಟೀಮ್​ಗೆ ಕ್ಯಾಪ್ಟನ್ ಅವರು, ನಾನು ಯಾವ ಆರ್ಡರ್​​ನಲ್ಲಿ ಬೇಕಾದರೂ ಆಡುತ್ತೇನೆ: ಸಚಿವ ಮಾಧುಸ್ವಾಮಿ - ಸಚಿವ ಮಾಧುಸ್ವಾಮಿ

ಖಾತೆ ಬದಲಾವಣೆ ಕುರಿತು ಪ್ರತಿಕ್ರಿಯಿಸಿದ ಸಚಿವ ಮಾಧುಸ್ವಾಮಿ, ಯಾವ ಖಾತೆ ಬದಲಾಗಿದೆ ಎಂಬುದು ನನಗೆ ಗೊತ್ತಿಲ್ಲ. ನಾನು ಯಾವ ಆರ್ಡರ್​​ನಲ್ಲಿ ಬೇಕಾದರೂ ಆಡುತ್ತೇನೆ. ಆದರೆ ನಾನು ಗ್ರಾಮೀಣ ಭಾಗದಲ್ಲಿ ಬೆಳೆದವನು. ನನಗೆ ವೈದ್ಯಕೀಯ ಸಚಿವ ಖಾತೆಗಿಂತ ಸಣ್ಣ ನೀರಾವರಿ ಖಾತೆ ಕೊಟ್ಟಿದ್ದರೆ ಒಳ್ಳೆಯದು ಎಂದು ಹೇಳಿದೆ. ಅದು ಸ್ವಲ್ಪ ಬೇಸರ ಅಷ್ಟೆ ಎಂದರು.

minister-madhuswamy
ಸಚಿವ ಮಾಧುಸ್ವಾಮಿ

By

Published : Jan 22, 2021, 7:22 PM IST

Updated : Jan 22, 2021, 7:46 PM IST

ಮೈಸೂರು: ನನ್ನ ಖಾತೆ ಬದಲಾವಣೆ ನನಗೆ ಡಿಪ್ರಮೋಷನ್ ಅಲ್ಲ. ಪ್ರಮೊಷನ್ ಎಂದು ಸಚಿವ ಮಾಧುಸ್ವಾಮಿ ಹೇಳಿದ್ದಾರೆ. ಮೈಸೂರಿನ ಸುತ್ತೂರು ಮಠಕ್ಕೆ ಭೇಟಿ ನೀಡಿದ ವೇಳೆ ಮಾತನಾಡಿದ ಅವರು, ಇಂದಿನ ನನ್ನ ಭೇಟಿ ರಾಜಕೀಯವಲ್ಲ. ಇಲ್ಲಿಗೆ ಯಾವಾಗಲೂ ಬರುತ್ತಿರುತ್ತೇನೆ ಎಂದರು.

ಖಾತೆ ಬದಲಾವಣೆ ಕುರಿತು ಪ್ರತಿಕ್ರಿಯಿಸಿ, ಯಾವ ಖಾತೆ ಬದಲಾಗಿದೆ ಎಂಬುದು ನನಗೆ ಗೊತ್ತಿಲ್ಲ. ಕ್ರಿಕೆಟ್ ಟೀಮ್​ಗೆ ಕ್ಯಾಪ್ಟನ್ ಅವರು, ನಾನು ಯಾವ ಆರ್ಡರ್​​ನಲ್ಲಿ ಬೇಕಾದರೂ ಆಡುತ್ತೇನೆ. ಫಸ್ಟ್ ಬ್ಯಾಟಿಂಗ್ ಆಡು ಎಂದರು ಆಡುತ್ತೇನೆ, ಬೌಲಿಂಗ್ ಮಾಡು ಅಂದರೂ ಮಾಡುತ್ತೇನೆ, ವಿಕೆಟ್ ಕೀಪಿಂಗ್ ಮಾಡು ಎಂದರೂ ಮಾಡುತ್ತೇನೆ ಎಂದರು.

ಖಾತೆ ಬದಲಾವಣೆ ಕುರಿತು ಸಚಿವ ಮಾಧುಸ್ವಾಮಿ ಪ್ರತಿಕ್ರಿಯೆ

ಆದರೆ ನಾನು ಗ್ರಾಮೀಣ ಭಾಗದಲ್ಲಿ ಬೆಳೆದವನು. ನನಗೆ ವೈದ್ಯಕೀಯ ಸಚಿವ ಖಾತೆಗಿಂತ ಸಣ್ಣ ನೀರಾವರಿ ಖಾತೆ ಕೊಟ್ಟಿದ್ದರೆ ಒಳ್ಳೆಯದು ಎಂದು ಹೇಳಿದೆ. ಅದು ಸ್ವಲ್ಪ ಬೇಸರ ಅಷ್ಟೆ ಎಂದರು.

ಅದನ್ನ ಬಿಟ್ಟರೆ ಬೇರೆನೂ ಇಲ್ಲ. ಈಗ ನೀಡಿರುವ ವೈದ್ಯಕೀಯ ಸಚಿವ ಖಾತೆ ದೊಡ್ಡದು. ಇದು ನನಗೆ ಡಿಪ್ರಮೋಷನ್ ಅಲ್ಲ, ಪ್ರಮೊಷನ್. ಸಂಪುಟ ವಿಸ್ತರಣೆ ಎಂದರೆ ಖಾತೆ ಬದಲಾವಣೆ ಎಲ್ಲವೂ ಸಹಜ ಪ್ರಕ್ರಿಯೆ ಎಂದರು.

ಇದನ್ನೂ ಓದಿ:ಸುತ್ತೂರು ಶ್ರೀಗಳ ಜೊತೆ ಮಾಧುಸ್ವಾಮಿ-ಮುನಿರತ್ನ ಗೌಪ್ಯ ಮಾತುಕತೆ

Last Updated : Jan 22, 2021, 7:46 PM IST

ABOUT THE AUTHOR

...view details