ಕರ್ನಾಟಕ

karnataka

ETV Bharat / state

ನಾನು ಯಾವುದಕ್ಕೂ ಬಗ್ಗುವುದಿಲ್ಲ, ಜಗ್ಗುವುದಿಲ್ಲ, ರಾಜೀನಾಮೆ ನೀಡುವುದಿಲ್ಲ: ಸಚಿವ ಈಶ್ವರಪ್ಪ - Ishwarappa pressmeet in mysore

minister ks Ishwarappa pressmeet
ಈಶ್ವರಪ್ಪ ಸುದ್ದಿಗೋಷ್ಟಿ

By

Published : Apr 2, 2021, 12:33 PM IST

Updated : Apr 2, 2021, 2:33 PM IST

12:36 April 02

ಪ್ರತಿಪಕ್ಷಗಳಿಗೂ ಟಾಂಗ್​ ಕೊಟ್ಟ ಗ್ರಾಮೀಣಾಭಿವೃದ್ಧಿ ಸಚಿವ

12:09 April 02

ಪಕ್ಷವೇ ನನಗೆ ತಾಯಿ, ಬಿಎಸ್​ವೈ ಮೇಲೆ ವೈಯಕ್ತಿಕ ಸಿಟ್ಟಿಲ್ಲ: ಈಶ್ವರಪ್ಪ ಸ್ಪಷ್ಟನೆ

ಸಚಿವ ಈಶ್ವರಪ್ಪ ಸುದ್ದಿಗೋಷ್ಟಿ

ಮೈಸೂರು:ನಾನು ಯಾವುದಕ್ಕೂ ಬಗ್ಗುವುದಿಲ್ಲ, ಜಗ್ಗುವುದಿಲ್ಲ , ನಾನು ರೆಬಲ್ ಅಲ್ಲ ನಾನು ಪಕ್ಷಕ್ಕೆ ಲಾಯಲ್ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಮತ್ತೊಮ್ಮೆ ಪರೋಕ್ಷವಾಗಿ ಸಿಎಂಗೆ ತಿರುಗೇಟು ನೀಡಿದ್ದಾರೆ.

ಇಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಮೈಸೂರಿನಲ್ಲಿ ಸುದೀರ್ಘ ಸುದ್ದಿಗೋಷ್ಠಿ ನಡೆಸಿ ನನ್ನ ಜಯಮಾನದಲ್ಲಿ ರೆಬಲ್ ಆಗಲ್ಲ‌ ನಾನು ಪಕ್ಷಕ್ಕೆ ಲಾಯಲ್ ಆದರೆ ನನ್ನನು ಹೆದರಿಸಲು ನಾನಾ ತಂತ್ರಗಳನ್ನು ಮತ್ತು ನನ್ನ ವಿರುದ್ಧ ಸಹಿ ಸಂಗ್ರಹ ಮಾಡಲಾಗುತ್ತಿದೆ. ಇದ್ದಕ್ಕೆಲ್ಲ ನಾನು ಜಗ್ಗುವುದಿಲ್ಲ ಬಗ್ಗುವುದಿಲ್ಲ ಅಂದ್ರು. ನಿನ್ನೆ ನನ್ನ ವಿರುದ್ಧ ಸುದ್ದಿಗೋಷ್ಠಿ ನಡೆಸಿದ ಮಂತ್ರಿಗಳೇ ನನಗೆ ಕರೆ ಮಾಡಿ ಹೇಳಿದ್ದಾರೆ. ನೀವು ಸರಿಯಾದ ಮತ್ತು ಗಟ್ಟಿಯಾದ ನಿಲುವನ್ನು ತೆಗೆದುಕೊಂಡಿದ್ದಿರಿ ನಿಮ್ಮ ಪರವಾಗಿ ನಾವೀದ್ದೇವೆ ಅಂತ ಹೇಳಿದ್ದಾರೆ. ಕೆಲವರು ನಿಮ್ಮ ಪರವಾಗಿ ಸಹಿ ಸಂಗ್ರಹ ಮತ್ತು ಪತ್ರಿಕಗೋಷ್ಠಿ ನಡೆಸುತ್ತೇವೆ ಎಂದು ಹೇಳಿತ್ತಿದ್ದಾರೆ, ಆದರೆ ನಾನೇ ಬೇಡ ಎಂದಿದ್ದೇನೆ. ಆ ಬಗ್ಗೆ ಹೈಕಮಾಂಡ್ ಜತೆ ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳುತ್ತೇವೆ. ಎಲ್ಲ ಸರಿಯಾಗುತ್ತದೆ ಎಂದು ಇದೇವೇಳೆ ವಿಶ್ವಾಸ ವ್ಯಕ್ತಪಡಿಸಿದರು. ಇನ್ನೊಂದೆಡೆ ಡಿ.ಕೆ.ಶಿವಕುಮಾರ್ ಅವರಿಗೆ ಟಾಂಗ್​ ಕೊಟ್ಟ, ಗ್ರಾಮೀಣಾಭಿವೃದ್ಧಿ ಸಚಿವರು,  ಈಶ್ವರಪ್ಪ‌ ಹಾಗೂ ಸಿಎಂ ರಾಜೀನಾಮೆ ನೀಡಲಿ ಎಂದು ಹೇಳುತ್ತಿರುವುದು ಸರಿಯಲ್ಲ ಎಂದರು.

ನಾನು ಮತ್ತು ಸಿಎಂ ಒಂದೇ... ಆದರೆ ಕೆಲವು ವಿಚಾರಗಳಲ್ಲಿ ನಾವಿಬ್ಬರು ಬೇರೆ ಬೇರೆ. ನಾನು ಸಂಘಟನೆಯಿಂದ ಬಂದವನು ಎಂದ ಈಶ್ವರಪ್ಪ, ಯಡಿಯೂರಪ್ಪ ಕೆಜೆಪಿ ಪಕ್ಷ ಕಟ್ಟಿ ಏನಾದರು ಎಂಬುದನ್ನು ಮಾಧ್ಯಮದವರ ಎದುರು ವಿವರಿಸಿದರು.

ನಾನು ಪತ್ರದ ವಿಚಾರವನ್ನು ರಾಜ್ಯ ಉಸ್ತುವಾರಿ ಆರುಣ್ ಸಿಂಗ್ , ನಳೀನ್ ಕುಮಾರ್ ಕಟಿಲ್‌ ಹಾಗೂ ಸಿಟಿ ರವಿ ಗಮನಕ್ಕೆ ತಂದಿದ್ದೇನೆ. ಇದ್ದಲ್ಲದೇ ಪ್ರಧಾನಿ ಮೋದಿ ಅಮಿತ್ ಶಾ ಗೆ ಪತ್ರ ಬರೆದಿದ್ದೇನೆ. ಹಣ ಬಿಡುಗಡೆ ಮಾಡಿ ಆದೇಶ ಹೊರಡಿಸಿ ಸಂಬಂಧಪಟ್ಟ ಮಂತ್ರಿಗಳ ಗಮನಕ್ಕೆ ತರದೇ ಈ ರೀತಿ ಸಿಎಂ ಮಾಡಿರುವುದು ಕಾನೂನು ಪ್ರಕಾರ ಸರಿಯಲ್ಲ‌ ಎಂಬುದನ್ನು ಎಲ್ಲರ ಗಮನಕ್ಕೆ ತಂದಿದ್ದೇನೆ ಎಂದರು.

ಪತ್ರ ಬರೆದ ಉದ್ದೇಶ ನನ್ನ ಮತ್ತು ಯಡಿಯೂರಪ್ಪ ನಡುವಿನ ವೈಯಕ್ತಿಕ ವಿಚಾರವಲ್ಲ,1299 ಕೋಟಿ ಹಣವನ್ನು ನನ್ನ ಇಲಾಖೆಗೆ ಸಂಬಂಧಿಸಿದನ್ನು ನನ್ನ ಗಮನಕ್ಕೆ ಬಾರದೆ ಸಿಎಂ ಬಿಡುಗಡೆ ಮಾಡಿರುವುದು ಸರಿಯಿಲ್ಲ.ಆ ದೃಷ್ಟಿಯಿಂದ ಪತ್ರ ಬರದಿದ್ದೇನೆ ಎಂದು ಸಚಿವ ಈಶ್ವರಪ್ಪ ತಿಳಿಸಿದ್ದಾರೆ.

Last Updated : Apr 2, 2021, 2:33 PM IST

ABOUT THE AUTHOR

...view details