ಮೈಸೂರು: ಕೆಆರ್‌ಎಸ್ ಬಿರುಕು ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಸಂಸದೆ ಸುಮಲತಾ ಭಾಷೆ ಬಳಕೆ ಸರಿಯಿಲ್ಲ, ನೋಡಿ ಮಾತನಾಡಿ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಹೆಚ್ಡಿಕೆ-ಸುಮಲತಾ ಬಳಸುತ್ತಿರುವ ಭಾಷೆ ಸರಿಯಿಲ್ಲ, ನೋಡಿ ಮಾತನಾಡಿ: ಕೆ.ಎಸ್.ಈಶ್ವರಪ್ಪ - Kumaraswamy and sumalatha speech
ಕೆಆರ್‌ಎಸ್ ಬಿರುಕು ವಿಚಾರವಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಮುರುಗೇಶ್ ನಿರಾಣಿ ಪ್ರತಿಕ್ರಿಯೆ ನೀಡಿದ್ದಾರೆ.
ಕೆ.ಎಸ್.ಈಶ್ವರಪ್ಪ
ಜಿ.ಪಂ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಸಂಸದೆ ಸುಮಲತಾ ಇಬ್ಬರ ಮೇಲೂ ಗೌರವವಿದೆ. ಆದರೆ ಇಬ್ಬರೂ ನೋಡಿ ಮಾತನಾಡಿ ಎಂದು ತಿಳಿಸಿದರು.
ಚುನಾವಣಾ ಮೀಸಲಾತಿ ಇಷ್ಟು ಬೇಗ ಪ್ರಕಟಿಸಬಾರದಿತ್ತು: ಜಿ.ಪಂ ಹಾಗೂ ತಾ.ಪಂ ಚುನಾವಣೆಗೆ ಇನ್ನೂ ಆರು ತಿಂಗಳು ಇದೆ. ಮೀಸಲಾತಿ ಪ್ರಕಟಿಸುವ ಮುನ್ನ ರಾಜ್ಯ ಸರ್ಕಾರದೊಂದಿಗೆ ಚುನಾವಣಾ ಆಯೋಗ ಸೌಜನ್ಯಕ್ಕಾದರೂ ಮಾತನಾಡಬೇಕಿತ್ತು. ಆದರೆ ಸರ್ಕಾರ ಮೀಸಲಾತಿ ಪ್ರಕಟಿಸಿದೆ ಎಂದು ಕೆಲವರು ಭಾವಿಸಿದ್ದಾರೆ. ಮೀಸಲಾತಿ ಬಗ್ಗೆ ನಾವು ಕೂಡ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದೇವೆ ಎಂದರು.