ಮೈಸೂರು: ನಾಡಪ್ರಭು ಕೆಂಪೇಗೌಡ ಜಯಂತಿಯ ಮೆರವಣಿಗೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರು ಡಮರುಗ ಹಿಡಿದು ಸಖತ್ ಸ್ಟೆಪ್ ಹಾಕಿದ್ದಾರೆ.
ಕೈಯಲ್ಲಿ ಡಮರುಗ ಹಿಡಿದು ಸಖತ್ ಸ್ಟೆಪ್ ಹಾಕಿದ ಜಿಟಿಡಿ... ಸೆಲ್ಫಿಗಾಗಿ ಮುಗಿ ಬಿದ್ದ ಅಭಿಮಾನಿಗಳು - undefined
ಇಂದು ಅರಮನೆ ಕೋಟೆ ಆಂಜನೇಯ ದೇವಸ್ಥಾನದ ಮುಂಭಾಗದಲ್ಲಿ ಏರ್ಪಡಿಸಿದ್ದ ಕೆಂಪೇಗೌಡ ಜಯಂತಿ ಮೆರವಣಿಗೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರು ಡಮರುಗ ಹಿಡಿದು ಸಖತ್ ಸ್ಟೆಪ್ ಹಾಕಿದ್ದು, ಇವರ ನತ್ಯಕ್ಕೆ ಮನಸೋತ ಅಭಿಮಾನಿಗಳು ಸೆಲ್ಫಿ ಕಿಕ್ಲಿಸಿಕೊಳ್ಳಲು ಮುಂದಾಗಿದ್ದರು.
![ಕೈಯಲ್ಲಿ ಡಮರುಗ ಹಿಡಿದು ಸಖತ್ ಸ್ಟೆಪ್ ಹಾಕಿದ ಜಿಟಿಡಿ... ಸೆಲ್ಫಿಗಾಗಿ ಮುಗಿ ಬಿದ್ದ ಅಭಿಮಾನಿಗಳು](https://etvbharatimages.akamaized.net/etvbharat/prod-images/768-512-3676510-thumbnail-3x2-mysore.jpg)
ಚಿವ ಜಿ.ಟಿ.ದೇವೇಗೌಡ
ಡಮರುಗ ಹಿಡಿದು ನೃತ್ಯ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ
ಜಿಲ್ಲಾಡಳಿತದ ವತಿಯಿಂದ ಅರಮನೆ ಕೋಟೆ ಆಂಜನೇಯ ದೇವಸ್ಥಾನದ ಮುಂಭಾಗದಲ್ಲಿ ಏರ್ಪಡಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಮೆರವಣಿಗೆ ರಥಕ್ಕೆ ಚಾಲನೆ ನೀಡಿದರು. ಮೆರವಣೆಗೆಯಲ್ಲಿ ಸಾಗುತ್ತಿದ್ದ ಸಚಿವರು ಗೊರವರ ಕುಣಿತ ತಂಡದಿಂದ ಡಮರುಗ ಪಡೆದು ಡಮರುಗ ಬಡೆಯುತ್ತ ಹೆಜ್ಜೆ ಹಾಕಿದರು.
ಇದನ್ನು ನೋಡಿದ ಅಭಿಮಾನಿಗಳು ಸೆಲ್ಫಿ ತೆಗೆದುಕೊಳ್ಳಲು ಮುಂದಾದರೆ, ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.