ಕರ್ನಾಟಕ

karnataka

ETV Bharat / state

ದಸರಾ ಕ್ರೀಡಾಕೂಟ ಧ್ವಜಾರೋಹಣ ವೇಳೆ ತುಂಡಾಗಿ ಬಿದ್ದ ಹಗ್ಗ; ಸಚಿವ ಸೋಮಣ್ಣಗೆ ಮುಜುಗರ - ಮೈಸೂರು

ಮೈಸೂರು ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದ ಉದ್ಘಾಟನೆ ನೆರವೇರಿಸಲು ಆಗಮಿಸಿದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಬಂದಿದ್ದರು. ಈ ವೇಳೆ ಅವರು ಧ್ವಜಾರೋಹಣ ಮಾಡಲು ಹಗ್ಗ ಎಳೆಯುತ್ತಿದ್ದಂತೆ ಹಗ್ಗ ತುಂಡಾಗಿ ಬಿದ್ದಿದೆ. ಘಟನೆಯಿಂದ ಸಚಿವರು ಮುಜುಗರ ಅನುಭವಿಸಿದ್ರು.

ದಸರಾ ಕ್ರೀಡಾಕೂಟ ಸಂದರ್ಭದಲ್ಲಿ ತುಂಡಾಗಿ ಬಿದ್ದ ಹಗ್ಗ

By

Published : Sep 19, 2019, 7:29 PM IST

ಮೈಸೂರು:ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದ ಉದ್ಘಾಟನೆ ನೆರವೇರಿಸಲು ಬಂದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಧ್ವಜಾರೋಹಣದ ಹಗ್ಗ ಎಳೆಯುತ್ತಿದ್ದಂತೆ ಹಗ್ಗ ತುಂಡಾಗಿ ಬಿದ್ದಿದೆ.

ಸಚಿವ ವಿ ಸೋಮಣ್ಣ ದಸರಾ ಕ್ರಿಡಾಕೂಟ ಉದ್ಘಾಟಿಸುತ್ತಿರುವ ವೇಳೆ ತುಂಡಾಗಿ ಬಿದ್ದ ಹಗ್ಗ
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದೊಂದಿಗೆ ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮವಿತ್ತು. ಸಚಿವ ವಿ ಸೋಮಣ್ಣ, ಧ್ವಜಾರೋಹಣದ ಮೂಲಕ ಉದ್ಘಾಟನೆಗೆ ಮುಂದಾದ್ರು. ಈ ವೇಳೆ ಹಗ್ಗ ಎಳೆದಾಗ ಅದು ತುಂಡಾಗಿ ಬಿತ್ತು. ಇದರಿಂದ ತೀವ್ರ ಮುಜುಗರಕ್ಕೊಳಗಾದ ಸಚಿವರು ಅಧಿಕಾರಿಗಳ ಮೇಲೆ ಸಿಟ್ಟಾಗಿ ಕ್ರೀಡಾಪಟುಗಳ ಪರಿಚಯಕ್ಕೆ ತೆರಳಿದ್ರು.

ಕೊನೆಗೂ ಧ್ವಜಾರೋಹಣ ನೆರವೇರದೆ ಜಿಲ್ಲಾ ಮಟ್ಟದ ಕ್ರೀಡಾಕೂಟ ಉದ್ಘಾಟನೆ ಆಯಿತು. ನಂತರ ಸಚಿವ ಸೋಮಣ್ಣ ಅಧಿಕಾರಿಗಳಿಗೆ ತಿಳಿ ಹೇಳಿ ತರಾತುರಿಯಲ್ಲಿ ಮುಂದಿನ ಕಾರ್ಯಕ್ರಮಕ್ಕೆ ತೆರಳಿದರು.

ABOUT THE AUTHOR

...view details