ಕರ್ನಾಟಕ

karnataka

ETV Bharat / state

ಪ್ರತಾಪ್ ಸಿಂಹ ವಿರುದ್ಧ ಅವರ ಪಕ್ಷ ಶಿಸ್ತುಕ್ರಮ ತೆಗೆದುಕೊಳ್ಳಬೇಕು: ಸಚಿವ ಡಾ.ಹೆಚ್.ಸಿ.ಮಹಾದೇವಪ್ಪ

ಸಂಸದ ಪ್ರತಾಪ್ ಸಿಂಹ ವಿರುದ್ಧ ಅವರ ಪಕ್ಷ ಶಿಸ್ತುಕ್ರಮ ತೆಗೆದುಕೊಳ್ಳಬೇಕು ಎಂದು ಸಚಿವ ಡಾ.ಹೆಚ್.ಸಿ ಮಹಾದೇವಪ್ಪ ಒತ್ತಾಯಿಸಿದ್ದಾರೆ.

ಸಚಿವ ಡಾ ಹೆಚ್ ಸಿ ಮಹಾದೇವಪ್ಪ
ಸಚಿವ ಡಾ ಹೆಚ್ ಸಿ ಮಹಾದೇವಪ್ಪ

By ETV Bharat Karnataka Team

Published : Dec 20, 2023, 9:45 PM IST

ಸಚಿವ ಡಾ ಹೆಚ್ ಸಿ ಮಹಾದೇವಪ್ಪ

ಮೈಸೂರು:ಸಂಸತ್ ಕಲಾಪದ ಸಂದರ್ಭದಲ್ಲಿ ಭದ್ರತಾ ಲೋಪ ಪ್ರಕರಣದಲ್ಲಿ ಪ್ರತಾಪ್ ಸಿಂಹ ವಿರುದ್ಧ ಅವರ ಪಕ್ಷ ಶಿಸ್ತುಕ್ರಮ ತೆಗೆದುಕೊಳ್ಳಬೇಕು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹಾದೇವಪ್ಪ ಒತ್ತಾಯಿಸಿದ್ದಾರೆ.

ಈಟಿವಿ ಭಾರತ್ ಜೊತೆ ಮಾತನಾಡಿದ ಸಚಿವರು, ಕೋವಿಡ್ ಸಂಬಂಧ ಜಿಲ್ಲೆಯಲ್ಲಿ ಯಾರೂ ಗಾಬರಿಪಡುವ ಅಗತ್ಯ ಇಲ್ಲ. ಈ ಬಗ್ಗೆ ಶೀಘ್ರವೇ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಲಿದ್ದೇವೆ. ಮಾಲೂರಿನ ಮೊರಾರ್ಜಿ ದೇಸಾಯಿ ಶಾಲೆಯ ಪ್ರಕರಣದಲ್ಲಿ ಈಗಾಗಲೇ ತಪ್ಪಿತಸ್ಥರನ್ನು ಸಸ್ಪೆಂಡ್ ಮಾಡಿ, ಅವರ ವಿರುದ್ಧ ಎಫ್​ಐಆರ್ ಹಾಕಿದ್ದೇವೆ. ಈಗಾಗಲೇ ಇಬ್ಬರನ್ನು ಬಂಧಿಸಲಾಗಿದೆ. ಇನ್ನೂ ಇಬ್ಬರು ತಲೆಮರೆಸಿಕೊಂಡಿದ್ದು, ಅವರನ್ನು ಬಂಧಿಸಲಾಗವುದು. ಮುಂದೆ ಈ ರೀತಿ ಘಟನೆಗಳು ಆಗದಂತೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಸಂಸತ್ ಪರಮೋಚ್ಚ ಸ್ಥಾನವಲ್ಲವೇ?. ಅದಕ್ಕೆ ಈ ರೀತಿ ಆದರೆ ಹೇಗೆ?. ಪ್ರತಾಪ್ ಸಿಂಹರ ರೀತಿ ಬೇರೆ ಪಾರ್ಟಿಯವರು ಅಥವಾ ಬೇರೆ ಧರ್ಮದವರು ಈ ರೀತಿ ಲೆಟರ್ ಕೊಟ್ಟಿದ್ದರೆ ಏನಾಗುತ್ತಿತ್ತು?. ಇವರೆಲ್ಲ ಏನು ಮಾಡುತ್ತಿದ್ದರು. ಆದರೆ ಸಾರ್ವಜನಿಕ ಜೀವನದಲ್ಲಿ ಒಳ್ಳೆಯವರೂ ಇರುತ್ತಾರೆ, ಕೆಟ್ಟವರೂ ಇರುತ್ತಾರೆ. ಗೊತ್ತಿಲ್ಲದೆ ಫೋಟೋ ತೆಗೆಸಿಕೊಂಡು ಹೋಗುತ್ತಾರೆ. ಅವರು ಈ ರೀತಿ ಮಾಡಿದರೆ ಅವರು ಕಾರಣ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಜವಾಬ್ದಾರಿಯುತವಾಗಿ ಇರಬೇಕು ಅಲ್ಲವೇ ಎಂದರು.

ಮೂರು ದಿನ ಮೈಸೂರು ಫೆಸ್ಟ್: ಮೈಸೂರು ಒಂದು ಹೆರಿಟೇಜ್ ಸಿಟಿ. ಅಲ್ಲದೇ ಅರಮನೆಗಳ ಕೇಂದ್ರ, ಐತಿಹಾಸಿಕ ಸ್ಥಳಗಳು, ಚಾರಿತ್ರಿಕ ಸ್ಥಳಗಳು, ಪ್ರವಾಸೋದ್ಯಮ ಪ್ರದೇಶಗಳು, ಎಲ್ಲಾ ಇರೋದರಿಂದ ಪ್ರವಾಸೋದ್ಯಮವನ್ನು ಪ್ರಮೋಟ್ ಮಾಡಲು ವಿಶೇಷವಾದಂತಹ ಕಾರ್ಯಕ್ರಮಗಳನ್ನು, ಮೈಸೂರು ಫೆಸ್ಟ್ ಅಂತ ಮಾಡಬೇಕು ಎಂದು ಹೇಳಿ ನಮ್ಮ ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕರು ಒಳ್ಳೆಯ ಆಲೋಚನೆ ಮಾಡಿ, ಪ್ರವಾಸೋದ್ಯಮ ಇಲಾಖೆಯ ಸಚಿವರಿಗೆ ಈ ಬಗ್ಗೆ ಮಾಹಿತಿ ನೀಡಿ, ಸಚಿವರು ಬಂದು ಉದ್ಘಾಟನೆ ಮಾಡಿ, ಲೋಗೋ ಬಿಡುಗಡೆ ಮಾಡಿದ್ದಾರೆ ಎಂದು ಹೇಳಿದರು.

ಮೈಸೂರಿನ ಚಾರಿತ್ರಿಕ ಹಿನ್ನೆಲೆ, ಸಾಂಸ್ಕೃತಿಕ ಹಿನ್ನೆಲೆ ಪ್ರವಾಸೋದ್ಯಮದ ಮೂಲಕ ಜಗತ್ತಿಗೆ ಗೊತ್ತಾಗಬೇಕು ಎಂದು ಒಂದು ಹೊಸ ಕಾರ್ಯಕ್ರಮವನ್ನು, ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕಿ ಸವಿತಾ ಮಾಡಿದ್ದಾರೆ. ಇದು ಒಂದು ಒಳ್ಳೆಯ ಕಾರ್ಯಕ್ರಮ. ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಬಂದಂತಹ ಮೈಸೂರಿನ ಪ್ರಾಮುಖ್ಯತೆ ಬಗ್ಗೆ, ಚರಿತ್ರೆಯ ಬಗ್ಗೆ, ಮೈಸೂರಿನ ಬ್ರಾಂಡ್​ಗಳ ಬಗ್ಗೆ ಮೈಸೂರು ಸಿಲ್ಕ್, ನಂಜನಗೂಡು ರಸಬಾಳೆ, ವೀಳ್ಯದೆಲೆ, ಮಲ್ಲಿಗೆ ಈ ರೀತಿಯ ಹಲವಾರು ಬ್ರಾಂಡ್‌ಗಳನ್ನು ಹೊಂದಿವೆ.

ಇವುಗಳನ್ನು ವಾಪಸ್ ಹೋಗುವಾಗ ತೆಗೆದುಕೊಂಡು ಹೋಗಬೇಕು. ಅದಕ್ಕೆ ಒಂದು ಹೊಸ ಕಾರ್ಯಕ್ರಮ. ಅದಕ್ಕೆ ಮೂರು ದಿನ ಮೈಸೂರು ಫೆಸ್ಟ್ ಮಾಡಿ ಜಾರಿಗೆ ಮಾಡಬೇಕು ಎಂದುಕೊಂಡಿದ್ದಾರೆ. ಜನವರಿ 24 ರಿಂದ ಕಾರ್ಯಕ್ರಮ ಮಾಡಬೇಕು ಎಂದುಕೊಂಡಿದ್ದೇವೆ ಎಂದು ಸಚಿವರು ತಿಳಿಸಿದರು.

ಇದನ್ನೂ ಓದಿ:ಪಕ್ಷ ತೀರ್ಮಾನಿಸಿದರೆ ಸ್ಪರ್ಧೆ ಮಾಡುತ್ತೇನೆ: ಡಾ ಹೆಚ್ ಸಿ ಮಹಾದೇವಪ್ಪ

ABOUT THE AUTHOR

...view details