ಮೈಸೂರು:ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ಹಾಗೂ ಬದಲಾವಣೆ ವಿಚಾರವಾಗಿ ಸಾಕಷ್ಟು ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ 'ಮೌನಂ ಅರೆ ಸಮ್ಮತಿ ಲಕ್ಷಣಂ' ಎನ್ನುವ ಮೂಲಕ ಸಚಿವ ಸಿ.ಪಿ. ಯೋಗೇಶ್ವರ್ ಅವರು ಪ್ರತಿಕ್ರಿಯೆಗೆ ನಕಾರ ವ್ಯಕ್ತಪಡಿಸಿದ್ದಾರೆ.
ಸಿಎಂ ಬದಲಾವಣೆ ವಿಚಾರ: 'ಮೌನಂ ಅರೆಸಮ್ಮತಿ ಲಕ್ಷಣಂ 'ಎಂದ ಸಚಿವ ಸಿ.ಪಿ. ಯೋಗೇಶ್ವರ್ - ಸಿಪಿ ಯೋಗೇಶ್ವರ್ ಲೇಟೆಸ್ಟ್ ಮೈಸೂರು ಭೇಟಿ
ಪ್ರಸ್ತುತ ಬಿಜೆಪಿಯಲ್ಲಿ ನಡೆಯುತ್ತಿದೆ ಎನ್ನಲಾದ ನಾಯಕತ್ವ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸದ ಸಚಿವ ಸಿ.ಪಿ.ಯೋಗೇಶ್ವರ್, 'ಮೌನಂ ಅರೆ ಸಮ್ಮತಿ ಲಕ್ಷಣಂ' ಎಂದಷ್ಟೇ ಹೇಳಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬದಲಾವಣೆ ಹಾಗೂ ಬಿ.ವೈ. ವಿಜಯೇಂದ್ರ ಮೇಲೆ ಸಾಕಷ್ಟು ಬಾರಿ ಅಸಮಾಧಾನ ಹೊರಹಾಕಿದ್ದ ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ತಲಕಾಡಿನ ಸರ್ಕಾರಿ ಅತಿಥಿ ಗೃಹದಲ್ಲಿ ಮಾಧ್ಯಮಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ್ರು. ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ವಿಚಾರವಾಗಿ ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆ ಸಚಿವರು ಮೌನ ವಹಿಸಿದರು. ಆಗ ಮೌನಂ ಸಮ್ಮತಿ ಲಕ್ಷಣಂ ಅಂಥಾ ಅರ್ಥಾನಾ ಎಂದು ಪುನಃ ಕೇಳಿದ್ದಕ್ಕೆ ಮೌನಂ ಅರೆ ಸಮ್ಮತಿ ಲಕ್ಷಣಂ ಎಂದಷ್ಟೇ ಉತ್ತರಿಸಿದ್ದಾರೆ.
ನಾನು ಈ ವಿಚಾರಗಳ ಬಗ್ಗೆ ಮಾತನಾಡುವುದಿಲ್ಲ. ಮಾತನಾಡಿದರೆ ತಪ್ಪಿಗೆ ಸಿಲುಕಿಸುತ್ತೀರಾ? ನಾನು ಮೂರು ದಿನಗಳಿಂದ ಮಡಿಕೇರಿಯಲ್ಲಿದ್ದೆ, ಯಾವುದೇ ರಾಜಕೀಯ ವಿದ್ಯಮಾನ ಗೊತ್ತಿಲ್ಲ ಎಂದ್ರು. ರಾಜಕೀಯದ ಬಗ್ಗೆ ಮಾತನಾಡುವ ಇಂಟ್ರೆಸ್ಟ್ ಇಲ್ಲ ಎಂದು ನಗುಮುಖದಲ್ಲೇ ಉತ್ತರಿಸಿದರು.