ಕರ್ನಾಟಕ

karnataka

ETV Bharat / state

₹100 ಕೋಟಿ ವೆಚ್ಚದಲ್ಲಿ ದೇವರಾಜ ಮಾರುಕಟ್ಟೆಯ ಪುನರ್ ನಿರ್ಮಾಣ : ಸಚಿವ ಭೈರತಿ ಬಸವರಾಜ್ - ಭೈರತಿ ಬಸವರಾಜ್ ಹೇಳಿಕೆ

ದೇವರಾಜ ಮಾರುಕಟ್ಟೆಯನ್ನು ತೆರೆವು ಮಾಡಿ, ಅಲ್ಲಿರುವ ವ್ಯಾಪಾರಸ್ಥರಿಗೆ ತಾತ್ಕಾಲಿಕ ವ್ಯವಸ್ಥೆ ಮಾಡಿ ಮಾರುಕಟ್ಟೆ ನಿರ್ಮಾಣವಾದ ಮೇಲೆ ಅಲ್ಲಿರುವ 750 ಜನ ವ್ಯಾಪಾರಸ್ಥರಿಗೆ ಅಂಗಡಿಗಳನ್ನು ಪುನಾಃ ನೀಡಲು ಚಿಂತಿಸಲಾಗಿದೆ..

ಮೈಸೂರಿನಲ್ಲಿ ಸಚಿವ ಭೈರತಿ ಬಸವರಾಜ್ ಹೇಳಿಕೆ
ಮೈಸೂರಿನಲ್ಲಿ ಸಚಿವ ಭೈರತಿ ಬಸವರಾಜ್ ಹೇಳಿಕೆ

By

Published : Jul 16, 2021, 3:05 PM IST

Updated : Jul 16, 2021, 3:50 PM IST

ಮೈಸೂರು :ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್ ಡೌನ್ ಬಿಲ್ಡಿಂಗ್‌ಗಳು ಬೀಳುವ ಸ್ಥಿತಿಯಲ್ಲಿವೆ. ಅವುಗಳನ್ನು ಯಾವ ರೀತಿಯಲ್ಲೂ ಉಳಿಸಲು ಸಾಧ್ಯವಿಲ್ಲ. ಆದ್ದರಿಂದ 2 ಕಟ್ಟಡಗಳನ್ನು ನೆಲಸಮ ಮಾಡಿ ಪುನರ್ ನಿರ್ಮಾಣ ಮಾಡಲು ಚಿಂತಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಹೇಳಿದ್ದಾರೆ.

ನಗರದ ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್ ಡೌನ್ ಬಿಲ್ಡಿಂಗ್‌ಗಳಿಗೆ ಭೇಟಿ ನೀಡಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮೈಸೂರು ನಗರಕ್ಕೆ ಉಂಡವಾಡಿಯಿಂದ 30 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ ನೀರಿನ ಸರಬರಾಜನ್ನು ಮಾಡಲಾಗುವುದು. ಜೊತೆಗೆ ನಗರದಲ್ಲಿ ಮಲ್ಟಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುವುದು ಎಂದರು.

ಮೈಸೂರಿನಲ್ಲಿ ಸಚಿವ ಭೈರತಿ ಬಸವರಾಜ್ ಹೇಳಿಕೆ

ಪಾರಂಪರಿಕ ಶೈಲಿಯಲ್ಲಿ ನೂತನವಾಗಿ ಕಟ್ಟಡ ನಿರ್ಮಾಣ ಮಾಡಲು ಚಿಂತಿಸಲಾಗಿದೆ. ದೇವರಾಜ ಮಾರುಕಟ್ಟೆಗೆ 100 ಕೋಟಿ ಹಾಗೂ ಲ್ಯಾನ್ಸ್ ಡೌನ್ ಬಿಲ್ಡಿಂಗ್‌ಗೆ ₹45 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣ ಮಾಡಲು ಚಿಂತನೆ ಮಾಡಲಾಗುತ್ತದೆ.

ದೇವರಾಜ ಮಾರುಕಟ್ಟೆಯನ್ನು ತೆರೆವು ಮಾಡಿ, ಅಲ್ಲಿರುವ ವ್ಯಾಪಾರಸ್ಥರಿಗೆ ತಾತ್ಕಾಲಿಕ ವ್ಯವಸ್ಥೆ ಮಾಡಿ ಮಾರುಕಟ್ಟೆ ನಿರ್ಮಾಣವಾದ ಮೇಲೆ ಅಲ್ಲಿರುವ 750 ಜನ ವ್ಯಾಪಾರಸ್ಥರಿಗೆ ಅಂಗಡಿಗಳನ್ನು ಪುನಾಃ ನೀಡಲು ಚಿಂತಿಸಲಾಗಿದೆ ಎಂದರು‌.

ದೇವರಾಜ ಮಾರುಕಟ್ಟೆ ನೆಲಸಮದ ಬಗ್ಗೆ ಹೈಕೋರ್ಟ್‌ನಲ್ಲಿ ದಾವೆಗಳಿವೆ. ಅದನ್ನು ಕಾನೂನು ರೀತಿ ಕ್ರಮ ತೆಗೆದುಕೊಂಡು ದೇವರಾಜ ಮಾರುಕಟ್ಟೆ ಪುನರ್ ನಿರ್ಮಾಣದ ಬಗ್ಗೆ 2 ತಿಂಗಳಲ್ಲಿ ಕ್ರಮ ವಹಿಸಲಾಗುವುದು. ರಾಜ್ಯದಲ್ಲಿ 7 ಸ್ಮಾರ್ಟ್ ಸಿಟಿಗಳ ಕಾಮಗಾರಿ ತ್ವರಿತವಾಗಿ ನಡೆಯುತ್ತಿದೆ ಎಂದು ಇದೇ ಸಂದರ್ಭದಲ್ಲಿ ಸಚಿವ ಭೈರತಿ ಅವರು ತಿಳಿಸಿದರು.

ಇದನ್ನೂ ಓದಿ : ದರ್ಶನ್​ ಪ್ರಕರಣ: ಗಂಗಾಧರ್ ಹೇಳಿಕೆಯನ್ನ ಪಿನ್ ಟೂ ಪಿನ್ ದಾಖಲಿಸುತ್ತಿರುವ ಪೊಲೀಸರು!

Last Updated : Jul 16, 2021, 3:50 PM IST

ABOUT THE AUTHOR

...view details