ಕರ್ನಾಟಕ

karnataka

ETV Bharat / state

ನೆರೆ ಪರಿಹಾರಕ್ಕಾಗಿ ಜಿಲ್ಲಾಧಿಕಾರಿಗಳ ಖಾತೆಯಲ್ಲಿ 800 ಕೋಟಿ ರೂ. ಇದೆ: ಸಚಿವ ಬಿ.ಸಿ. ಪಾಟೀಲ್ - ಮೈಸೂರಿನಲ್ಲಿ ಸಭೆ ನಡೆಸಿದ ಕೃಷಿ ಸಚಿವ ಬಿಸಿ ಪಾಟೀಲ್

ಬೆಳೆ ಹಾನಿಗೆ ಈಗಾಗಲೇ ಪರಿಹಾರ ಬಿಡುಗಡೆ ಮಾಡಿದ್ದೇವೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಹಾನಿ ಆದರೆ ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಗಳ ಖಾತೆಯಲ್ಲಿ 800 ಕೋಟಿ ಹಣ ಇಟ್ಟಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.

BC Patil
ಬಿಸಿ ಪಾಟೀಲ್

By

Published : Oct 16, 2020, 6:24 PM IST

ಮೈಸೂರು:ಬೆಳೆ ಹಾನಿ ಆಗಿದ್ದರೆ ತಕ್ಷಣ ಹಣ ಬಿಡುಗಡೆ ಮಾಡಲು ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಗಳ ಖಾತೆಯಲ್ಲಿ 800 ಕೋಟಿ ಹಣ ಇಟ್ಟಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿಕೆ ನೀಡಿದ್ದಾರೆ.

ನೆರೆ ಪರಿಹಾರ ಕುರಿತು ಕೃಷಿ ಸಚಿವ ಬಿ.ಸಿ. ಪಾಟೀಲ್ ಪ್ರತಿಕ್ರಿಯೆ

ಇಂದು ಮೈಸೂರಿನಲ್ಲಿ ಕೃಷಿ ಅಧಿಕಾರಿಗಳ ಸಭೆ ನಡೆಸಿದ ಕೃಷಿ ಸಚಿವ ಬಿ.ಸಿ. ಪಾಟೀಲ್ ಬೆಳೆ ಹಾನಿಗೆ ಈಗಾಗಲೇ ಪರಿಹಾರ ಬಿಡುಗಡೆ ಮಾಡಿದ್ದೇವೆ ಇನ್ನು ಏನಾದರೂ ಬೆಳೆ ಹಾನಿ ಆದರೆ ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಗಳ ಖಾತೆಯಲ್ಲಿ 800 ಕೋಟಿ ರೂಪಾಯಿ ಇಟ್ಟಿದ್ದಾರೆ. ಎಲ್ಲಿಯಾದರೂ ಬೆಳೆ ಹಾನಿ ಆದರೆ ಸರ್ವೆ ಮಾಡಿ ತಕ್ಷಣ ಹಣ ನೀಡಿ ಎಂದು ಆದೇಶ ಮಾಡಿದ್ದಾರೆ ಎಂದರು.

ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ವಿಪರೀತ ಮಳೆಯಾಗುತ್ತಿದ್ದು, ಈ ಮಳೆಗೆ ಮನೆ ಗೋಡೆ ಬಿದ್ದರೆ 5 ಲಕ್ಷ ಕೊಡಬೇಕೆಂದು ಹೇಳಿದ್ದೇವೆ. ಬೆಳೆ ಸರ್ವೇ ನಡೆಯುತ್ತಿದ್ದು, ಕಳೆದ ವರ್ಷ 99.02 ರಷ್ಟು ಸರ್ವೇ ಆಗಿದೆ. ಈ ವರ್ಷ ಸರ್ವೇ ಬಾಕಿ ಇದೆ ಎಂದ ಸಚಿವರು ಉತ್ತರ ಕರ್ನಾಟಕ, ಬೆಳಗಾವಿ, ವಿಜಯಪುರ, ಕಲಬುರಗಿ ಜಿಲ್ಲೆಯಲ್ಲಿ ಮಳೆಯಿಂದ ಹಾನಿಯಾಗಿದೆ ಎಂದರು. ‌ಮೈಸೂರು ಭಾಗದಲ್ಲಿ ರಸಗೊಬ್ಬರದ ಕೊರತೆ ಇಲ್ಲವೆಂದು ಅಂಕಿ-ಅಂಶಗಳ ಸಮೇತ ಸಚಿವರು ವಿವರಿಸಿದರು.

ABOUT THE AUTHOR

...view details