ಕರ್ನಾಟಕ

karnataka

ETV Bharat / state

ಸಿಎಂ ನಾಯಕತ್ವದಲ್ಲಿಯೇ ಮುಂದಿನ ಚುನಾವಣೆ: ಸಚಿವ ಡಾ.ಅಶ್ವತ್ಥ ನಾರಾಯಣ್ - ಬಸವರಾಜ ಬೊಮ್ಮಾಯಿ

ಮುಂಬರುವ ವಿಧಾನಸಭೆ ಚುನಾವಣೆಗೆ ಬಿಜೆಪಿಯಲ್ಲಿ ನಾಯಕತ್ವದ ಸದ್ದು ಕೇಳಿ ಬರುತ್ತಿದೆ. ಈಗಾಗಲೇ ನಾಯಕತ್ವ ಬದಲಾವಣೆಯ ಬಳಿಕ ಮಹಾನಗರ ಪಾಲಿಕೆ ಚುನಾವಣೆ ಎದುರಿಸಿರುವ ಬಿಜೆಪಿ ಮುಂದಿನ ಚುನಾವಣೆಗೆ ಯಾರ ನಾಯಕತ್ವದಲ್ಲಿ ಮುನ್ನಡೆಯಲಿದೆ ಎಂಬ ಪ್ರಶ್ನೆ ಎದುರಾಗಿದೆ.

Minister Ashwath Narayan
ಸಚಿವ ಡಾ.ಅಶ್ವತ್ಥ್ ನಾರಾಯಣ್

By

Published : Sep 7, 2021, 12:26 PM IST

Updated : Sep 7, 2021, 2:22 PM IST

ಮೈಸೂರು:ಮುಂದಿನ ವಿಧಾನಸಭೆ ಚುನಾವಣೆ ಸಿಎಂ ನಾಯಕತ್ವದಲ್ಲಿ ಮುಂದುವರಿಯುತ್ತೇವೆ. ಉಳಿದಿದ್ದನ್ನು ಪಕ್ಷ ತೀರ್ಮಾನ ಮಾಡಲಿದೆ ಎಂದು ಉನ್ನತ ಶಿಕ್ಷಣ ಸಚಿವ‌ ಡಾ.ಸಿ.ಎನ್.ಅಶ್ವತ್ಥ ನಾರಾಯಣ್​ ಹೇಳಿದ್ದಾರೆ.

ಬೊಮ್ಮಾಯಿ ನೇತೃತ್ವದಲ್ಲೇ ಮುಂದಿನ ಚುನಾವಣೆ ಎಂಬ ಅಮಿತ್ ಶಾ ಹೇಳಿಕೆ ವಿಚಾರವಾಗಿ ಮೈಸೂರಿನ ಖಾಸಗಿ ಹೋಟೆಲ್​​​ನಲ್ಲಿ ಮಾತನಾಡಿದ ಅವರು, ಯಾವುದೇ ಪಕ್ಷದಲ್ಲಿ ನಾಯಕರಿದ್ದಾಗ ಅವರ ಮುಂದಾಳತ್ವದಲ್ಲಿ ಎಲ್ಲಾ ನಡೆದುಕೊಂಡು ಹೋಗುತ್ತಿರುತ್ತದೆ. ಈಗ ಸಿಎಂ ಬೊಮ್ಮಾಯಿ ಇದ್ದಾರೆ, ಅಧ್ಯಕ್ಷರು ಕಟೀಲ್ ಇದ್ದಾರೆ. ಅವರ ಮುಂದಾಳತ್ವದಲ್ಲಿ ಪಕ್ಷ ನಡೆಯುತ್ತಿದೆ. ಅದರ ಚರ್ಚೆ ಈಗ ಬೇಡ ಎಂದರು.

ಸಿಎಂ ನಾಯಕತ್ವದಲ್ಲಿಯೇ ಮುಂದಿನ ಚುನಾವಣೆ: ಸಚಿವ ಡಾ.ಅಶ್ವತ್ಥ ನಾರಾಯಣ್

ನೂತ‌ನ ಶಿಕ್ಷಣ ನೀತಿಗೆ ಜಾರಿ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ನಿಗದಿಯಂತೆ ಪ್ರಸಕ್ತ ಸಾಲಿನಿಂದಲೇ ಎನ್​ಇಪಿ ಜಾರಿಯಾಗಲಿದೆ. ಏಳೆಂಟು ವರ್ಷದಿಂದಲೇ ಚರ್ಚೆಯಲ್ಲಿರುವುದರಿಂದ ಅಭಿಪ್ರಾಯ ಸಂಗ್ರಹ ಅಗತ್ಯವಿಲ್ಲ. ಈ ವಿಚಾರದಲ್ಲಿ ಕಾಂಗ್ರೆಸ್ ಅನಗತ್ಯ ಗೊಂದಲ ಸೃಷ್ಟಿ ಮಾಡುತ್ತಿದೆ ಎಂದರು.

ನೂತ‌ನ ಶಿಕ್ಷಣ ನೀತಿಯಿಂದ ಹಿಂದುಳಿದ ವರ್ಗ ಸೇರಿ ಎಲ್ಲರ ಅಭಿವೃದ್ಧಿ ಸಾಧ್ಯ ಇದೆ. ಕಾಂಗ್ರೆಸ್​​​ಗೆ ಯಾವುದೇ ಅಭಿವೃದ್ಧಿ ಬೇಕಾಗಿಲ್ಲ. ಹೀಗಾಗಿಯೇ ಅವರು ಅನಗತ್ಯ ಗೊಂದಲ ಸೃಷ್ಟಿ ಮಾಡಿ ವಿರೋಧ ಮಾಡುತ್ತಿದ್ದಾರೆ ಎಂದರು.

ಆಫ್ಘನ್​ ವಿದ್ಯಾರ್ಥಿಗಳ ವೀಸಾ ವಿಸ್ತರಣೆ ವಿಚಾರವಾಗಿ ಮಾತನಾಡಿ, ಅದನ್ನ ವಿದೇಶಾಂಗ ಸಚಿವರು ನೋಡಿಕೊಳ್ಳುತ್ತಾರೆ. ಅವಧಿ ಮುಗಿದವರು ಅರ್ಜಿ ಹಾಕಿಕೊಳ್ಳಲಿ. ಅದನ್ನ ವಿದೇಶಾಂಗ ಇಲಾಖೆಯವರು ಪರಿಶೀಲನೆ ಮಾಡುತ್ತಾರೆ. ನಾವು ಯಾರಿಗೂ ತಿಂಗಳ ಅವಧಿಗೆ ವೀಸಾ ಕೊಡೋದಿಲ್ಲ. ಶೈಕ್ಷಣಿಕ ಅವಧಿಗೆ ಅಂತ ವೀಸಾ ಪಡೆದುಕೊಂಡಿರ್ತಾರೆ. ಇದರಲ್ಲಿ ನಾವು ತಲೆತೂರಿಸುವ ಪ್ರಮೇಯ ಇಲ್ಲ ಎಂದರು.

ಇದನ್ನೂ ಓದಿ:ಕಲಬುರಗಿ ಪಾಲಿಕೆಯಲ್ಲಿ ಬಿಜೆಪಿ, ಜೆಡಿಎಸ್​ ಮೈತ್ರಿ ಖಚಿತ: ಸಿಎಂ ಬೊಮ್ಮಾಯಿ

Last Updated : Sep 7, 2021, 2:22 PM IST

ABOUT THE AUTHOR

...view details