ಮೈಸೂರು :ಕೋವಿಡ್ ಪರೀಕ್ಷಾ ವರದಿಯಲ್ಲಿ ನೆಗೆಟಿವ್ ಬಂದರೂ ಮೊಬೈಲ್ಗೆ ಬಂದ ಮೆಸೇಜ್ನಲ್ಲಿ ಪಾಸಿಟಿವ್ ಎಂದು ನಮೂದಿಸಲಾಗಿದೆ. ಇದರಿಂದ ಯಾವ ವರದಿ ಸರಿಯಿದೆ ಎಂದು ಗೊತ್ತಾಗದೆ ವ್ಯಕ್ತಿ ಗೊಂದಲಕ್ಕೊಳಗಾಗಿರುವ ಘಟನೆ ನಡೆದಿದೆ.
ಕೋವಿಡ್ ವರದಿ ಎಡವಟ್ಟು.. ಪರೀಕ್ಷೆಯಲ್ಲಿ ನೆಗೆಟಿವ್, ಮೆಸೇಜ್ನಲ್ಲಿ ಪಾಸಿಟಿವ್..
ಸರ್ಕಾರಿ ಆಸ್ಪತ್ರೆಯಲ್ಲಿ ವರದಿ ನೆಗೆಟಿವ್ ಎಂದಿದೆ. ನಂತರ 3 ದಿನದ ಬಳಿಕ ಆಸ್ಪತ್ರೆಗೆ ಹೋಗಿದ್ದು ಮತ್ತೆ ವರದಿ ನೆಗೆಟಿವ್ ಬಂದಿತ್ತು. ಆದರೆ, ಈ ವೇಳೆ ಜಿಲ್ಲಾಧಿಕಾರಿ ಕಚೇರಿಯಿಂದ ಮೊಬೈಲ್ಗೆ ಬಂದಿರುವ ಮೆಸೇಜ್ನಲ್ಲಿ ನಿಮಗೆ ಪಾಸಿಟಿವ್ ಎಂದು ವರದಿಯಾಗಿದೆ..
ನಂಜನಗೂಡು ತಾಲೂಕಿನ ದೇವರಸನಹಳ್ಳಿ ಗ್ರಾಮದ ವ್ಯಕ್ತಿಯೋರ್ವರು ಜ್ವರದ ಲಕ್ಷಣ ಕಾಣಿಸಿದ ಹಿನ್ನೆಲೆ ಕೋವಿಡ್ ಪರೀಕ್ಷೆಗೊಳಗಾಗಿದ್ದಾರೆ. ನಂಜನಗೂಡಿನ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್-19 ಪರೀಕ್ಷೆಗೊಳಪಟ್ಟಿದ್ದು, ವರದಿ ನೆಗೆಟಿವ್ ಎಂದು ಬಂದಿತ್ತು. ನಂತರ 3 ದಿನದ ಬಳಿಕ ಆಸ್ಪತ್ರೆಗೆ ಹೋಗಿದ್ದು ಮತ್ತೆ ವರದಿ ನೆಗೆಟಿವ್ ಬಂದಿದೆ. ಆದರೆ, ಈ ವೇಳೆ ಜಿಲ್ಲಾಧಿಕಾರಿಯ ಕಚೇರಿಯಿಂದ ಮೊಬೈಲ್ಗೆ ಬಂದಿರುವ ಮೆಸೇಜ್ನಲ್ಲಿ ನಿಮಗೆ ಪಾಸಿಟಿವ್ ಎಂದು ವರದಿಯಾಗಿದೆ.
ಈ ಮೆಸೇಜ್ ನೋಡಿದ ವ್ಯಕ್ತಿ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದು, ಸುಳ್ಳು ವರದಿ ನೀಡಿ ಮೋಸ ಮಾಡುತ್ತಿದ್ದಾರೆ. ಜನರಿಗೆ ಸರಿಯಾದ ವರದಿ ನೀಡಿ, ನನಗೆ ಮೋಸ ಮಾಡಿದ ಹಾಗೆ ಉಳಿದವರಿಗೂ ಮಾಡಬೇಡಿ ಎಂದು ಆಕ್ರೋಶ ಹೊರ ಹಾಕಿದ್ದಾರೆ.