ಕರ್ನಾಟಕ

karnataka

ETV Bharat / state

ಆ್ಯಂಬುಲೆನ್ಸ್​ನಿಂದ ಜಿಗಿದು ಕತ್ತು ಕೊಯ್ದುಕೊಂಡ ಮಾನಸಿಕ ಅಸ್ವಸ್ಥ - ಚಿಕಿತ್ಸೆ ಫಲಿಸದೇ ಸಾವು - ಮೈಸೂರು ಆತ್ಮಹತ್ಯೆ ಪ್ರಕರಣ

ಮಾನಸಿಕ‌ ಅಸ್ವಸ್ಥ ಶಿವಣ್ಣನನ್ನು ಮೈಸೂರಿನ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಆ್ಯಂಬುಲೆನ್ಸ್​ನಿಂದ ಜಿಗಿದು ತಿ. ನರಸೀಪುರ ರಸ್ತೆ ಮಧ್ಯೆ ಕುಳಿತು ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ‌. ಬಳಿಕ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾನೆ.

Mentally disabled person committed suicide
ಮಾನಸಿಕ ಅಸ್ವಸ್ಥ ಆತ್ಮಹತ್ಯೆ

By

Published : Jun 20, 2021, 5:22 PM IST

Updated : Jun 20, 2021, 5:30 PM IST

ಮೈಸೂರು: ‌ಮಾನಸಿಕ ಅಸ್ವಸ್ಥನೋರ್ವ ಕತ್ತು ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವ ಘಟನೆ ತಿ‌. ನರಸೀಪುರ ತಾಲೂಕಿನಲ್ಲಿ ನಡೆದಿದೆ.

ತಿ. ನರಸೀಪುರ ತಾಲೂಕಿನ ಕನ್ನಳ್ಳಿ ಮೋಳೆ ಗ್ರಾಮದ ಶಿವಣ್ಣ (42) ಮೃತ ವ್ಯಕ್ತಿ.‌ ಮಾನಸಿಕ‌ ಅಸ್ವಸ್ಥ ಶಿವಣ್ಣನನ್ನು ಮೈಸೂರಿನ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಆ್ಯಬುಲೆನ್ಸ್​ನಿಂದ ಜಿಗಿದು ತಿ. ನರಸೀಪುರ ರಸ್ತೆ ಮಧ್ಯೆ ಕುಳಿತು ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ‌. ಈತನ ವರ್ತನೆ ಕಂಡು ಸಾರ್ವಜನಿಕರು ಗಾಬರಿಯಾಗಿದ್ದಾರೆ.

ಕತ್ತು ಕೊಯ್ದುಕೊಂಡ ಮಾನಸಿಕ ಅಸ್ವಸ್ಥ, ಚಿಕಿತ್ಸೆ ಫಲಿಸದೇ ಸಾವು

ಇದನ್ನೂ ಓದಿ:'ನನ್ನ ಜೀವನದಲ್ಲಿ ಕಪ್ಪು ಚುಕ್ಕೆ ಇರಲಿಲ್ಲ'.. ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ವರದಿಗಾರ

ಪೊಲೀಸರು ಹಾಗೂ ಸಾರ್ವಜನಿಕರು ಈತನನ್ನು ಹಿಡಿದು ಕೆ.ಆರ್. ಆಸ್ಪತ್ರೆಗೆ ಕಳುಹಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಶಿವಣ್ಣ ಮೃತಪಟ್ಟಿದ್ದಾನೆ.

Last Updated : Jun 20, 2021, 5:30 PM IST

ABOUT THE AUTHOR

...view details