ಮೈಸೂರು:ಅಂಗಡಿಗಳಿಗೆ ಗ್ರಾಹಕರನ್ನು ಸೆಳೆಯುವ ವಿಚಾರವಾಗಿ ರಸ್ತೆಯಲ್ಲಿಯೇ ಮಧ್ಯವರ್ತಿಗಳು ಹೊಡೆದಾಡಿಕೊಂಡಿರುವ ಘಟನೆ ಚಾಮುಂಡಿ ಬೆಟ್ಟದಲ್ಲಿ ನಡೆದಿದೆ.
ಇಲ್ಲಿಗೆ ಬನ್ನಿ, ಅಲ್ಲಿಗೆ ಬನ್ರೀ.. ತಾಯಿ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ಮಧ್ಯವರ್ತಿಗಳ ಬಡಿದಾಟ.. - chamundi hill
ಅಂಗಡಿಗಳಿಗೆ ಗ್ರಾಹಕರನ್ನು ಸೆಳೆಯುವ ವಿಚಾರವಾಗಿ ರಸ್ತೆಯಲ್ಲಿಯೇ ಮಧ್ಯವರ್ತಿಗಳು ಹೊಡೆದಾಡಿಕೊಂಡಿರುವ ಘಟನೆ ಚಾಮುಂಡಿ ಬೆಟ್ಟದಲ್ಲಿ ನಡೆದಿದೆ.
![ಇಲ್ಲಿಗೆ ಬನ್ನಿ, ಅಲ್ಲಿಗೆ ಬನ್ರೀ.. ತಾಯಿ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ಮಧ್ಯವರ್ತಿಗಳ ಬಡಿದಾಟ..](https://etvbharatimages.akamaized.net/etvbharat/prod-images/768-512-4887866-thumbnail-3x2-sow.jpg)
ಚಾಮುಂಡಿ ಬೆಟ್ಟಕ್ಕೆ ಬರುವ ಪ್ರವಾಸಿಗರು ಹಾಗೂ ಭಕ್ತಾದಿಗಳನ್ನ ಅಂಗಡಿಗಳ ಮಧ್ಯವರ್ತಿಗಳು ಕರೆದುಕೊಂಡು ಹೋಗಿ ಬೆಟ್ಟದ ತಪ್ಪನಲ್ಲಿರುವ ದೊಡ್ಡಮಟ್ಟದ ಅಂಗಡಿಗಳಿಗೆ
ಬಿಟ್ಟರೆ, ಅಂಗಡಿ ಮಾಲೀಕರು ಮಧ್ಯವರ್ತಿಗಳಿಗೆ ಇಂತಿಷ್ಟು ಅಂತಾ ಕಮಿಷನ್ ಕೊಡ್ತಾರೆ. ಇದಕ್ಕಾಗಿ ಮಧ್ಯವರ್ತಿಗಳು ಬೆಟ್ಟಕ್ಕೆ ಆಗಮಿಸುವ ಪ್ರವಾಸಿಗರು ಹಾಗೂ ಭಕ್ತರನ್ನ ಪುಸಲಾಯಿಸಿ, ತಾವು ಸೂಚಿಸಿದ ಅಂಗಡಿಗಳಿಗೆ ತೆರಳಿದ್ರೆ ಕಡಿಮೆ ಬೆಲೆಯಲ್ಲಿ ಬೇಕಾದ ವಸ್ತುಗಳು ಸಿಗುತ್ತದೆ ಎಂದು ಹೇಳಿ ಕಳುಹಿಸುತ್ತಾರೆ.
ಬೆಟ್ಟ ಮಲ್ಟಿ ಪಾರ್ಕಿಂಗ್ ಸಮೀಪ ಇದೇ ವಿಚಾರವಾಕ್ಕೆ ಇಬ್ಬರು ಮಧ್ಯವರ್ತಿಗಳು ಹೊಡೆದಾಡಿಕೊಂಡಿದ್ದು, ಈ ದೃಶ್ಯ ನೋಡಿದ ಸಾರ್ವಜನಿಕರು, ಪೊಲೀಸರು ಇಂತಹ ಮಧ್ಯವರ್ತಿಗಳಿಗೆ ಬಿಸಿ ಮುಟ್ಟಿಸಬೇಕು ಎಂದು ಒತ್ತಾಯಿಸಿದ್ದಾರೆ.