ಮೈಸೂರು: ಭೀಕರ ರಸ್ತೆ ಅಪಘಾತದಲ್ಲಿ ಎಂಬಿಬಿಎಸ್ಅಂತಿಮ ವರ್ಷದ ವಿದ್ಯಾರ್ಥಿಯೋರ್ವ ಮೃತಪಟ್ಟಿರುವ ಘಟನೆ ನಗರದ ಶಾಂತಲಾ ಥಿಯೇಟರ್ ಸಿಗ್ನಲ್ನಲ್ಲಿ ಬುಧವಾರ ನಸುಕಿನ ಜಾವ ಸಂಭವಿಸಿದೆ.
ಮೈಸೂರಿನಲ್ಲಿ ಭೀಕರ ರಸ್ತೆ ಅಪಘಾತ: ಅಂತಿಮ ವರ್ಷದ MBBS ವಿದ್ಯಾರ್ಥಿ ಸಾವು - ಸಿಸಿಟಿವಿ ವಿಡಿಯೋ
ಸಿಗ್ನಲ್ ದಾಟುವಾಗ ಕೆಎಸ್ಆರ್ಟಿಸಿ ಬಸ್ಸೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಿಂದ ಬಿದ್ದ ರಭಸಕ್ಕೆ ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಮೃತಪಟ್ಟಿದ್ದಾರೆ. ಮೈಸೂರಲ್ಲಿ ಈ ಘಟನೆ ನಡೆದಿದೆ.
ಅಂತಿಮ ವರ್ಷದ MBBS ವಿದ್ಯಾರ್ಥಿ ಸಾವು
ಬೆಳಗಾವಿಯ ಘಟಪ್ರಭಾದ ಎಲ್.ಎಚ್. ರಾಹುಲ್ ಅಪಘಾತದಲ್ಲಿ ಸಾವನ್ನಪ್ಪಿದ ವಿದ್ಯಾರ್ಥಿ. ಸಿಗ್ನಲ್ ದಾಟುವಾಗ ಕೆಎಸ್ಆರ್ಟಿಸಿ ಬಸ್ಸೊಂದು ರಾಹುಲ್ ಬೈಕ್ಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ರಾಹುಲ್ ಬೈಕ್ನಿಂದ ಬಿದ್ದ ರಭಸಕ್ಕೆ ತಲೆಗೆ ಪೆಟ್ಟಾಗಿ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ.
ಭೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕೆ.ಆರ್. ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
Last Updated : Jan 5, 2022, 4:36 PM IST