ಮೈಸೂರು:ಕೊರೊನಾದಿಂದ ದೂರವಿರಲು ಮಾಸ್ಕ್ ಧರಿಸೋಣ ಎಂಬ ಸಂದೇಶ ಸಾರಲು, ಮೈಸೂರು ರೈಲ್ವೆ ನಿಲ್ದಾಣದಲ್ಲಿ ಪ್ರತಿಮೆಗಳಿಗೂ ಮಾಸ್ಕ್ ಹಾಕುವ ಮೂಲಕ ಪ್ರಯಾಣಿಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ.
ಮೈಸೂರು ರೈಲ್ವೆ ನಿಲ್ದಾಣದಲ್ಲಿ ಪ್ರತಿಮೆಗಳಿಗೂ ಮಾಸ್ಕ್! - mysore railway station
ಮೈಸೂರು ರೈಲು ನಿಲ್ದಾಣದಲ್ಲಿರುವ 6 ಪ್ರತಿಮೆಗಳಿಗೆ ಮಾಸ್ಕ್ ತೊಡಿಸಲಾಗಿದ್ದು, ಇದರ ಮೂಲಕ ಜನರಲ್ಲಿ ಮಾಸ್ಕ್ ಧರಿಸುವ ಜಾಗೃತಿ ಮೂಡಿಸಲಾಗುತ್ತಿದೆ.

statue
ಪ್ರತಿಮೆಗಳಿಗೆ ಮಾಸ್ಕ್
ಇಂದಿನಿಂದ ರೈಲು ಸಂಚಾರ ಆರಂಭವಾಗಲಿದೆ. ಈ ಹಿನ್ನಲೆಯಲ್ಲಿ ಮೈಸೂರು ರೈಲು ನಿಲ್ದಾಣದಲ್ಲಿರುವ 6 ಪ್ರತಿಮೆಗಳಿಗೆ ಮಾಸ್ಕ್ ತೊಡಿಸಲಾಗಿದೆ.
ಈ ಪ್ರತಿಮೆಗಳು, ಪ್ರಪಂಚದಾದ್ಯಂತ ಕೊರೊನಾ ಸೋಂಕು ಹರಡುತ್ತಿದ್ದು, ಸಾರ್ವಜನಿಕರು, ಪ್ರಯಾಣಿಕರು ಎಚ್ಚರಿಕೆಯಿಂದ ಇರಬೇಕು. ಸೋಂಕು ಹರಡದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂಬ ಸಂದೇಶ ಸಾರುತ್ತಿದೆ.