ಮೈಸೂರು: ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ರಥದ ಮೇಲೆ ಇರಿಸಲು ಮ್ಯಾನುವಲ್ ಲಿಫ್ಟ್ ಅನ್ನು ಇಂದು ದೇವಾಲಯದ ಆಡಳಿತ ಮಂಡಳಿಗೆ ಹಸ್ತಾಂತರಿಸಲಾಯಿತು.
ಚಾಮುಂಡೇಶ್ವರಿ ದೇವಸ್ಥಾನಕ್ಕೆ ಮ್ಯಾನುವಲ್ ಲಿಫ್ಟ್ ಹಸ್ತಾಂತರಿಸಿದ ಸಚಿವರು - ಚಾಮುಂಡೇಶ್ವರಿ ದೇವಸ್ಥಾನಕ್ಕೆ ನೂತನ ಮ್ಯಾನುವಲ್ ಲಿಫ್ಟ್
ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ರಥದ ಮೇಲೆ ಇರಿಸಲು ಸಹಾಯವಾಗಲಿ ಎಂದು ಮ್ಯಾನುವಲ್ ಲಿಫ್ಟ್ ಅನ್ನು ಇಂದು ದೇವಾಲಯದ ಆಡಳಿತ ಮಂಡಳಿಗೆ ಸಚಿವ ಎಸ್.ಟಿ.ಸೋಮಶೇಖರ್ ಹಸ್ತಾಂತರ ಮಾಡಿದರು.
ನಾಡ ಅದಿದೇವತೆ ಚಾಮುಂಡೇಶ್ವರಿ ತಾಯಿಯ ಉತ್ಸವ ಮೂರ್ತಿಯನ್ನು ರಥೋತ್ಸವದ ದಿನ ಇರಿಸಲು ಮ್ಯಾನುವಲ್ ಲಿಫ್ಟ್ ಅನ್ನು ರೈಲ್ವೆ ಇಲಾಖೆ ತಯಾರಿಸಿದೆ. ಇದನ್ನು ಇಂದು ದೇವಸ್ಥಾನದ ಆಡಳಿತ ಮಂಡಿಳಿಗೆ ಸಚಿವ ಎಸ್.ಟಿ.ಸೋಮಶೇಖರ್ ಹಸ್ತಾಂತರಿಸಿದರು. ರಾಜ್ಯದಲ್ಲಿಯೇ ಮೊದಲ ಬಾರಿಗೆ ನಿರ್ಮಾಣ ಆಗಿರುವ ಸುಸಜ್ಜಿತ ಮ್ಯಾನುವಲ್ ಲಿಫ್ಟ್ ಇದಾಗಿದೆ.
ಈ ಬಗ್ಗೆ ದೇವಸ್ಥಾನದ ಅರ್ಚಕರಾದ ಶಶಿಶೇಖರ ದೀಕ್ಷಿತ್ ಮಾಹಿತಿ ನೀಡಿದ್ದು, ಈ ಹಿಂದೆ ಮ್ಯಾನುವಲ್ ಲಿಫ್ಟ್ ಅನ್ನು ಮಹಾರಾಜರು ನೀಡಿದ್ದರು. ಅದು ಕೆಟ್ಟು ಹೋಗಿತ್ತು. ಈಗ ರೈಲ್ವೆ ಇಲಾಖೆಯವರು ಅದೇ ರೀತಿಯ ಲಿಫ್ಟ್ ಮಾಡಿ ಕೊಟ್ಟಿದ್ದಾರೆ. ರಥೋತ್ಸವದ ದಿನ ಈ ಲಿಫ್ಟ್ ಅನ್ನು ಉಪಯೋಗಿಸಲಾಗುತ್ತದೆ ಎಂದರು.