ಮೈಸೂರು: ವಿಚಾರವಾದಿ, ಕ್ರಾಂತಿಕಾರಿ ಮಂಟೇಲಿಂಗಯ್ಯ (75) ಹೃದಯಾಘಾತದಿಂದ ಇಂದು (ಸೋಮವಾರ) ನಿಧನರಾಗಿದ್ದಾರೆ. ಇವರಿಗೆ ಪತ್ನಿ, ಮೂವರು ಪುತ್ರಿಯರು ಇದ್ದಾರೆ.
ಮಂಡ್ಯ ಜಿಲ್ಲೆಯ ಮಳವಳ್ಳಿಯ ಕೆಸರೆಯಲ್ಲಿ ನೆಲೆಸಿದ್ದರು. ಕೆಸರೆಯಲ್ಲಿರುವ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮೃತದೇಹದ ಅಂತ್ಯಕ್ರಿಯೆ ಮಂಗಳವಾರ ಮಧ್ಯಾಹ್ನ ಗಾಂಧಿನಗರದ ರುದ್ರಭೂಮಿಯಲ್ಲಿ ನಡೆಯಲಿದೆ.
ಬಡ ಜನಪರ ಕಾಳಜಿ ಹೊಂದಿದ್ದು ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ ಹೋರಾಟ ಮಾಡುತ್ತಿದ್ದವರಲ್ಲಿ ಮಂಟೇಲಿಂಗಯ್ಯ ಮುಂಚೂಣಿಯಲ್ಲಿ ಇರುತ್ತಿದ್ದರು. ಎಜೆಎಂಎಸ್ ಸಂಘಟನೆ ಹುಟ್ಟು ಹಾಕಿ ಜನಪರ ಚಳವಳಿಯಲ್ಲಿ ಸಕ್ರಿಯರಾಗಿದ್ದರು. ಮೈಸೂರು ದಸರಾಕ್ಕೆ ಪ್ರತಿಯಾಗಿ ಬಡವರ ದಸರಾವನ್ನು ಅದ್ಧೂರಿಯಾಗಿ ಆಚರಿಸಿ ರಾಜ್ಯದ ಗಮನ ಸೆಳೆದಿದ್ದರು.