ಕರ್ನಾಟಕ

karnataka

ETV Bharat / state

ಕಂಕಣ ಸೂರ್ಯ ಗ್ರಹಣದ ವೇಳೆ ಬಂದ್​ ಆಗಿದ್ದ ದೇಗುಲಗಳು: ಗ್ರಹಣದ ಬಳಿಕ ಪೂಜೆ ಪುನಾರಂಭ - Mysore temple closed for the reason of solar eclipes

ಕಂಕಣ ಸೂರ್ಯ ಗ್ರಹಣ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸಾಕಷ್ಟು ದೇವಾಲಯಗಳಲ್ಲಿ ಪೂಜೆ ಸ್ತಬ್ದವಾಗಿತ್ತು. ಗ್ರಹಣ ಮುಕ್ತಿ ನಂತರ ಚಿಕ್ಕಬಳ್ಳಾಪುರ,ಮೈಸೂರು, ಮಂಗಳೂರಿನ ದೇವಾಲಯಗಳು ಎಂದಿನಂತೆ ಪೂಜಾ ಕಾರ್ಯವನ್ನು ಮುಂದುವರೆಸಿವೆ.

mangalore-dot-mysore-chikkaballapura-temple-closed-for-the-reason-of-solar-eclipes
ಕಂಕಣ ಸೂರ್ಯ ಗ್ರಹಣ...ರಾಜ್ಯದ ಯಾವ ದೇಗುಲಗಳು ಬಂದ್ ಆಗಲಿವೆ ಗೊತ್ತಾ?

By

Published : Dec 26, 2019, 1:36 PM IST

ಮೈಸೂರು:ಕಂಕಣ ಸೂರ್ಯಗ್ರಹಣ ಹಿನ್ನೆಲೆಯಲ್ಲಿ ರಾಜ್ಯಾದಾದ್ಯಂತ ಸಾಕಷ್ಟು ದೇವಾಲಯಗಳಲ್ಲಿ ಪೂಜೆಯನ್ನು ಸ್ಥಗಿತಗೊಳಿಸಲಾಗಿತ್ತು. ಗ್ರಹಣ ಮುಕ್ತಿ ನಂತರ ಚಿಕ್ಕಬಳ್ಳಾಪುರ ದೇವಾಲಯಗಳಲ್ಲಿ ಶುದ್ಧೀಕರಣ ನಡೆಯಿತು. ಅದರಂತೆಯೇ ಸೂರ್ಯಗ್ರಹಣ ನಿಮಿತ್ತ ಇಂದು ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಮೈಸೂರಿನಲ್ಲಿ ದೇವಸ್ಥಾನದ ಬಾಗಿಲು ಬಂದ್ ಮಾಡಲಾಗಿತ್ತು.

ಕಂಕಣ ಸೂರ್ಯ ಗ್ರಹಣ...ರಾಜ್ಯದ ಯಾವ ದೇಗುಲಗಳು ಬಂದ್ ಆಗಲಿವೆ ಗೊತ್ತಾ?

ದಕ್ಷಿಣ ಕಾಶಿ ನಂಜನಗೂಡಿನ ನಂಜುಂಡೇಶ್ವರನಿಗೆ ಗ್ರಹಣದ ಸಂದರ್ಭದಲ್ಲಿ ವಿಶೇಷ ಪೂಜೆ:

ಗ್ರಹಣದ ಸಂದರ್ಭದಲ್ಲಿ ಎಲ್ಲಾ ದೇವಾಲಯಗಳು ಬಾಗಿಲು‌ಗಳನ್ನು ಮುಚ್ಚಲಾಗಿತ್ತು. ಆದರೆ ನಂಜನಗೂಡಿನ ನಂಜುಂಡೇಶ್ವರ ದೇವರಿಗೆ ಗ್ರಹಣದ ಮುನ್ನಾ ವಿಶೇಷ ಪೂಜೆ ಸಲ್ಲಿಸಿ ನಂತರ ಬಾಗಿಲನ್ನು ಹಾಕದೆ ಗ್ರಹಣದ ಸಂದರ್ಭದಲ್ಲೂ ದೇವರ ದರ್ಶನ ಹಾಗೂ ಪೂಜೆ ನಡೆದಿದ್ದು ವಿಶೇಷವಾಗಿತ್ತು.

ಮಂಗಳೂರಿನ ದೇವಾಲಯಗಳಲ್ಲಿ ಪೂಜೆ ಸ್ಥಗಿತ...

ಬೆಳಗ್ಗೆ 8 ಗಂಟೆಯಿಂದ 11 ಗಂಟೆಯವರೆಗೆ ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ಮಂಗಳೂರಿನ ದೇವಾಲಯಗಳಲ್ಲಿ ಪೂಜೆ ಸ್ಥಗಿತಗೊಳಿಸಲಾಗಿತ್ತು. ಭಕ್ತರು ದೇವಾಲಯದಲ್ಲಿ ಪ್ರಾರ್ಥಿಸಿ ಹೋಗುತ್ತಿದ್ದು, ಯಾವುದೇ ಪೂಜಾ ಸೇವೆಗಳು ಲಭ್ಯವಿರಲಿಲ್ಲ. 11 ಗಂಟೆ ನಂತರ ದೇವಸ್ಥಾನಗಳ ಬಾಗಿಲು ತೆರೆದುಕೊಂಡಿದ್ದು, ಮತ್ತೆ ಪೂಜಾ ಕೈಂಕರ್ಯಗಳು ಎಂದಿನಂತೆ ಸಾಗಿವೆ.

For All Latest Updates

TAGGED:

ABOUT THE AUTHOR

...view details