ಮೈಸೂರು: 50 ಮರಿ ಮಾಡಿದ್ದ ಮಂಡಲದ ಹಾವನ್ನು ಉರಗ ತಜ್ಞ ರಕ್ಷಣೆ ಮಾಡಿರುವ ಘಟನೆ ಜಿಲ್ಲೆಯ ಬಿಳಿಕೆರೆ ಬಳಿಯ ಗ್ರಾಮವೊಂದರಲ್ಲಿ ನಡೆದಿದೆ.
ಮೈಸೂರಲ್ಲಿ 50 ಮರಿ ಮಾಡಿದ್ದ ಮಂಡಲದ ಹಾವು ರಕ್ಷಣೆ..! - ಮೈಸೂರು ಜಿಲ್ಲೆ
50 ಮರಿ ಹಾಕಿದ್ದ ಮಂಡಲದ ಹಾವನ್ನು ಉರಗ ತಜ್ಞ ರಕ್ಷಣೆ ಮಾಡಿರುವ ಘಟನೆ ಮೈಸೂರು ಜಿಲ್ಲೆಯ ಬಿಳಿಕೆರೆ ಬಳಿಯ ಗ್ರಾಮವೊಂದರಲ್ಲಿ ನಡೆದಿದೆ.
ಗುಂಡಿಯೊಂದರಲ್ಲಿ ಮಂಡಲದ ಹಾವೊಂದು ಮೊಟ್ಟೆ ಇಟ್ಟು 50 ಮರಿ ಮಾಡಿಸಿತ್ತು. ಇದನ್ನು ಕಂಡ ಗ್ರಾಮಸ್ಥರು ಉರಗ ತಜ್ಞ ಮೊಹಮ್ಮದ್ ಉಮರ್ ಷರೀಫ್ಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಈತ ಹಾವು ಹಾಗೂ ಅದರ ಮರಿಗಳನ್ನು ರಕ್ಷಣೆ ಮಾಡಿ ಅರಣ್ಯ ಅಧಿಕಾರಿಗಳ ಅನುಮತಿ ಪಡೆದು ಕಾಡಿಗೆ ಬಿಟ್ಟಿದ್ದಾರೆ.
ಸಾಮಾನ್ಯವಾಗಿ ಈ ಮಂಡಲದ ಹಾವನ್ನು ಕೊಳಕಮಂಡಲ ಎಂದು ಕರೆಯುವುದುಂಟು. ಇದು ಮಾನವರ ಮೇಲೆ ಉಸಿರು ಬಿಟ್ಟರೆ ಶರೀರವೇ ಕೊಳೆತು ಬಿಡುತ್ತದೆ ಎಂಬ ಭಾವನೆ ಇದ್ದು, ಇದು ತಪ್ಪು. ಇದು ಕಚ್ಚಿದರೆ ಮಾತ್ರ ಅಪಾಯ ಎನ್ನುತ್ತಾರೆ. ಅಲ್ಲದೆ 50 ಮರಿಗಳನ್ನು ಮಾಡಿರುವ ಈ ಹಾವು ತುಂಬಾ ಆಶ್ಚರ್ಯಕ್ಕೆ ಕಾರಣವಾಗಿದೆ ಎನ್ನುತ್ತಾರೆ ಉರಗ ತಜ್ಞ ಮೊಹಮ್ಮದ್ ಉಮರ್ ಷರೀಫ್.