ಮೈಸೂರು: ಸಾಲಗಾರರ ಕಾಟ ತಾಳಲಾರದೆ ತಾನು ಕೆಲಸ ಮಾಡುತ್ತಿದ್ದ ಲಾಡ್ಜ್ನಲ್ಲಿಯೇ ವ್ಯಕ್ತಿ ನೇಣಿಗೆ ಶರಣಾಗಿರುವ ಘಟನೆ ನಂಜನಗೂಡು ಪಟ್ಟಣದಲ್ಲಿ ನಡೆದಿದೆ.
ಸಾಲಗಾರರ ಕಾಟಕ್ಕೆ ಮನನೊಂದು ಲಾಡ್ಜ್ನಲ್ಲೇ ವ್ಯಕ್ತಿ ನೇಣಿಗೆ ಶರಣು - latest mysuru suicide news
ಸಾಲಗಾರರ ಕಾಟ ತಾಳಲಾರದೆ ಪ್ರೇಮ್ ಕುಮಾರ್ ಎಂಬಾತ ತಾನು ಕೆಲಸ ಮಾಡುತ್ತಿದ್ದ ಲಾಡ್ಜ್ನಲ್ಲಿಯೇ ನೇಣಿಗೆ ಶರಣಾಗಿರುವ ಘಟನೆ ನಂಜನಗೂಡು ಪಟ್ಟಣದಲ್ಲಿ ನಡೆದಿದೆ.
![ಸಾಲಗಾರರ ಕಾಟಕ್ಕೆ ಮನನೊಂದು ಲಾಡ್ಜ್ನಲ್ಲೇ ವ್ಯಕ್ತಿ ನೇಣಿಗೆ ಶರಣು](https://etvbharatimages.akamaized.net/etvbharat/prod-images/768-512-5152423-thumbnail-3x2-mysur.jpg)
ಮೂಲತಃ ನಂಜನಗೂಡು ಪಟ್ಟಣದ ಕುರುಬಗೇರಿ ನಿವಾಸಿಯಾದ ಪ್ರೇಮ್ ಕುಮಾರ್ (55) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ನಂಜನಗೂಡು ಪಟ್ಟಣದ ಲಾಡ್ಜ್ನಲ್ಲಿ ಕೆಲಸ ಮಾಡುತ್ತಿದ್ದ ಈತ ಮೈಸೂರಿನ ಖಾಸಗಿ ಬ್ಯಾಂಕ್ ಹಾಗೂ ನಂಜನಗೂಡು ಪಟ್ಟಣದ ಕೆಲವು ಸ್ವಸಹಾಯ ಸಂಘಗಳಿಂದ ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದ ಎನ್ನಲಾಗಿದೆ. ಸಾಲಗಾರರು ಲಾಡ್ಜ್ಗೆ ಬಂದು ಗಲಾಟೆ ಮಾಡುತ್ತಿದ್ದರು. ಇದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.
ಇನ್ನು ಈತ ನಂಜನಗೂಡಿನಲ್ಲಿ ಮನೆ ಕಟ್ಟಲು ಸಾಲ ಮಾಡಿದ್ದ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದ್ದು, ಈ ಸಂಬಂಧ ನಂಜನಗೂಡು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.