ಮೈಸೂರು :ಮೂರು ವರ್ಷಗಳ ಹಿಂದೆ ತನ್ನ ಪತ್ನಿಯ ಮೇಲೆ ಸೀಮೆಎಣ್ಣೆ ಸುರಿದು ಕೊಲೆ ಮಾಡಿದ್ದ ಪತಿಗೆ ನಗರದ 5ನೇ ಮತ್ತು ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ತಾಲೂಕಿನ ಕೇರ್ಗಳ್ಳಿ ಗ್ರಾಮದ ಬಸವಯ್ಯ ಎಂಬುವನು ಜೀವಾವಧಿ ಶಿಕ್ಷೆಗೆ ಗುರಿಯಾದವ. ಈತ 22 ವರ್ಷಗಳ ಹಿಂದೆ ನಾಗರತ್ನ ಎಂಬುವರನ್ನು ಮದುವೆಯಾಗಿದ್ದ. ಬಸವಯ್ಯನಿಗೆ ಕುಡಿತದ ಚಟವಿದ್ದು, ಪ್ರತಿದಿನ ಕುಡಿದು ಪತ್ನಿಯ ಶೀಲದ ಬಗ್ಗೆ ಅನುಮಾನಿಸಿ ಜಗಳವಾಡುತ್ತಿದ್ದ.
2018ರ ಅಕ್ಟೋಬರ್ನಲ್ಲಿ ಬಸವಯ್ಯ ಪತ್ನಿಯೊಂದಿಗೆ ಜಗಳವಾಡಿ ಆಕೆಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.