ಮೈಸೂರು:ಒಂದು ಗುಂಟೆ ಜಮೀನಿನ ಹಣಕಾಸು ವಿಚಾರದಲ್ಲಿ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ನಂಜನಗೂಡು ತಾಲೂಕು ಆಲಂಬೂರು ಗ್ರಾಮದಲ್ಲಿ ನಡೆದಿದೆ.
ಆಸ್ತಿ ಕಲಹ: ಅಣ್ಣನ ಮಗನಿಂದಲೇ ಚಿಕ್ಕಪ್ಪನ ಕೊಲೆ ಗ್ರಾಮದ ಲಕ್ಷ್ಮಣ್ (50) ಅಣ್ಣನ ಮಗನಿಂದ ಕೊಲೆಯಾದ ದುರ್ದೈವಿ. ಒಂದು ಗುಂಟೆ ಜಮೀನಿನ ಹಣಕಾಸು ವಿಚಾರದಲ್ಲಿ ಆರಂಭವಾದ ಗಲಾಟೆಯಿಂದ ರೊಚ್ಚಿಗೆದ್ದ ಅಣ್ಣನ ಮಗ ಸಿದ್ದರಾಜು ಚಿಕ್ಕಪ್ಪನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಆಸ್ತಿ ಕಲಹ: ಅಣ್ಣನ ಮಗನಿಂದಲೇ ಚಿಕ್ಕಪ್ಪನ ಕೊಲೆ ಶವಪರೀಕ್ಷೆಗಾಗಿ ಮೃತದೇಹವನ್ನು ಮೈಸೂರಿನ ಕೆಆರ್ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಡಿವೈಎಸ್ಪಿ ಗೋವಿಂದರಾಜು, ವೃತ್ತನಿರೀಕ್ಷಕ ಲಕ್ಷ್ಮಿಕಾಂತ ತಳವಾರ್, ಬಿಳಿಗೆರೆ ಠಾಣೆ ಪಿಎಸ್ಐ ಭೇಟಿ ನೀಡಿ ಮಹಜರು ನಡೆಸಿ ತನಿಖೆ ಕೈಗೊಂಡಿದ್ದಾರೆ.
ಈ ಸಂಬಂಧ ಮೃತನ ಮಗಳು ಚೈತ್ರ ಬಿಳಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಓದಿ:ಕಿರುಕುಳಕ್ಕೆ ಬೇಸತ್ತು ವ್ಯಕ್ತಿ ಆತ್ಮಹತ್ಯೆ: ಈ ಫೈನಾನ್ಸ್ ವಿರುದ್ಧ ಎಫ್ಐಆರ್