ಕರ್ನಾಟಕ

karnataka

ETV Bharat / state

ಮನೆಬಿಟ್ಟು ಹೋಗುತ್ತೀನಿ ಎಂದಿದ್ದಕ್ಕೆ ಪ್ರಿಯತಮೆಯ ಕೊಂದ ಪ್ರಿಯಕರ - Man killed his Lover in mysore

ಪ್ರಿಯಕರ ಪ್ರಿಯತಮೆಯ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ಕೊಲೆ ಮಾಡಿರುವ ಘಟನೆ ಮೈಸೂರು ತಾಲ್ಲೂಕಿನ ಬೆಳವಾಡಿಯಲ್ಲಿ ನಡೆದಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

Man killed his Lover in mysore
ಮನೆಬಿಟ್ಟು ಹೋಗುತ್ತೀನಿ ಎಂದಿದ್ದಕ್ಕೆ ಪ್ರಿಯತಮೆಯ ಕೊಂದ ಪ್ರಿಯಕರ

By

Published : Apr 16, 2021, 9:53 AM IST

ಮೈಸೂರು: ವಿಪರೀತ ಕಿರುಕುಳದಿಂದ ಬೇಸತ್ತು, ಮನೆಬಿಟ್ಟು ಹೋಗುತ್ತೀನಿ ಎಂದು ಹೇಳಿದ್ದಕ್ಕೆ ಕೋಪಗೊಂಡ ಪ್ರಿಯಕರ ಪ್ರಿಯತಮೆಯ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ಕೊಲೆಗೈದ ಘಟನೆ ಮೈಸೂರು ತಾಲ್ಲೂಕಿನ ಬೆಳವಾಡಿಯಲ್ಲಿ ನಡೆದಿದೆ.

ಬೆಳವಾಡಿಯಲ್ಲಿ 25 ವರ್ಷದ ಯುವತಿಯ ಮೇಲೆ ಕಿರಣ್ (27) ಎಂಬ ಯುವಕ ಈ ಕೃತ್ಯ ಎಸಗಿದ್ದಾನೆ.

ಪ್ರಕರಣದ ವಿವರ

ಹೆಚ್.ಡಿ.ಕೋಟೆ ತಾಲ್ಲೂಕಿನ ಕ್ಯಾತನಹಳ್ಳಿ ಗ್ರಾಮದ ಯುವತಿ ಪತಿಯನ್ನು ತೊರೆದು ಕಳೆದ 8 ತಿಂಗಳಿನಿಂದ ಅತ್ತೆಯ ಮಗ ಕಿರಣ್ ಜತೆ ವಾಸವಿದ್ದಳು. ಆದರೆ ಕಿರಣ್​ ನೀಡುತ್ತಿದ್ದ ಕಿರುಕುಳದಿಂದ ಬೇಸತ್ತ ಆಕೆ ನಿನ್ನನ್ನು ಬಿಟ್ಟು ಹೋಗುತ್ತೇನೆ ಎಂದು ಹೇಳಿದ್ದಾಳೆ. ಇದರಿಂದ ಕೋಪಗೊಂಡ ಕಿರಣ್​ ಆಕೆಯ ತಲೆಗೆ ಮಚ್ಚಿನಿಂದ ಬಲವಾಗಿ ಹೊಡೆದು ಕೊಲೆ ಮಾಡಿದ್ದಾನೆ.

ಈ ಸಂಬಂಧ ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ:ವಿರೋಧದ ನಡುವೆ ಪ್ರೀತಿಸಿ ಮದುವೆ; ಪತ್ನಿ ಕೊಂದು ನೇಣಿಗೆ ಶರಣಾದ ಪತಿ

ABOUT THE AUTHOR

...view details