ಮೈಸೂರು: ಮನೆ ದುರಸ್ತಿ ಮಾಡುವ ಸಂದರ್ಭದಲ್ಲಿ ಸಜ್ಜ ಕುಸಿದು ವೃದ್ಧನೋರ್ವ ಸಾವನ್ನಪ್ಪಿರುವ ಘಟನೆ ಹೆಚ್.ಡಿ. ಕೋಟೆ ತಾಲೂಕಿನ ಶೀರನಹುಂಡಿ ಗ್ರಾಮದಲ್ಲಿ ನಡೆದಿದೆ.
ಹಳೇ ಮನೆ ದುರಸ್ತಿ ವೇಳೆ ಸಜ್ಜ ಕುಸಿದು ವೃದ್ಧ ಸಾವು - ವ್ಯಕ್ತಿ ಸಾವು
ಮನೆ ದುರಸ್ತಿ ಮಾಡುವ ಸಂದರ್ಭದಲ್ಲಿ ಸಜ್ಜ ಕುಸಿದು ವೃದ್ಧನೋರ್ವ ಸಾವನ್ನಪ್ಪಿರುವ ಘಟನೆ ಹೆಚ್.ಡಿ ಕೋಟೆ ತಾಲೂಕಿನ ಶೀರನಹುಂಡಿ ಗ್ರಾಮದಲ್ಲಿ ನಡೆದಿದೆ.
ವ್ಯಕ್ತಿ ಸಾವು
ಹೆಚ್.ಡಿ. ಕೋಟೆ ತಾಲೂಕಿನ ಶೀರನಹುಂಡಿ ಗ್ರಾಮದ ನಿವಾಸಿಯಾದ ಜವರಯ್ಯ (68) ಮೃತ ವ್ಯಕ್ತಿ. ಮಳೆಯಿಂದಾಗಿ ಇವರ ಮನೆ ಸಂಪೂರ್ಣ ಹಾಳಾಗಿತ್ತು. ಆ ಮನೆಯನ್ನು ದುರಸ್ತಿ ಮಾಡಲು ಮುಂದಾಗಿದ್ದ ವೇಳೆ ಏಕಾಏಕಿ ಸಜ್ಜ ಕುಸಿದಿದ್ದು, ಮನೆಯ ಹಿರಿಯ ಜವರಯ್ಯ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಉಳಿದವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ಈ ಘಟನೆ ಹೆಚ್.ಡಿ. ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.