ಕರ್ನಾಟಕ

karnataka

ETV Bharat / state

ನಿನ್ನೆ ವಿಡಿಯೋ ಕಾಲ್​ ಮಾಡಿ ಗುಣಮುಖನಾಗುವೆ ಎಂದಾತ ಇಂದು ಕೋವಿಡ್​ಗೆ ಬಲಿ! - ಮೈಸೂರು ಕೊರೊನಾ ಸುದ್ದಿ

ಮೈಸೂರಿನಲ್ಲಿ ನಿನ್ನೆ ವಿಡಿಯೋ ಕಾಲ್​ನಲ್ಲಿ ಗುಣಮುಖನಾಗುವೆ ಎಂದ ಕೊರೊನಾ ಸೋಂಕಿತ ಇಂದು ಸಾವನ್ನಪ್ಪಿದ್ದಾನೆ.

ಕೋವಿಡ್​ಗೆ ಬಲಿ
ಕೋವಿಡ್​ಗೆ ಬಲಿ

By

Published : May 22, 2021, 12:03 PM IST

ಮೈಸೂರು: ಕೊರೊನಾ ಕೇಕೆ ಮುಂದುವರೆದಿದ್ದು, ವಾರದ ಅಂತರದಲ್ಲಿ ಇಬ್ಬರು ಸಹೋದರರನ್ನು ಕಳೆದುಕೊಂಡ ತಮ್ಮ ಕಂಗಾಲಾಗಿದ್ದಾನೆ.

ಕೋವಿಡ್​ಗೆ ಬಲಿ

ಬಂಡಿಪಾಳ್ಯದ ನಿವಾಸಿ ನವೀನ್ ಎಂಬುವರ ಎರಡನೇ ಅಣ್ಣ ಪ್ರಸಾದ್ (31) ಕಳೆದ ವಾರ ಸಾವನ್ನಪ್ಪಿದ್ದರು. ಇಂದು ಮೊದಲನೇ ಅಣ್ಣ ರಾಘವೇಂದ್ರ(33) ಕೊರೊನಾಗೆ ಬಲಿಯಾಗಿದ್ದಾರೆ.

ರಾಘವೇಂದ್ರ ನಿನ್ನೆಯಷ್ಟೆ ಪತ್ನಿ ಹಾಗೂ ತಮ್ಮ ನವೀನ್​ಗೆ ವಿಡಿಯೋ ಕಾಲ್ ಮಾಡಿ, ನಾನು ಗುಣಮುಖನಾಗಿ ಬರುವೆ ಎಂದು ಹೇಳಿದ್ದರಂತೆ. ಆದರೆ ಇಂದು ಸಾವನ್ನಪ್ಪಿದ್ದಾರೆ.

ಇಬ್ಬರು ಅಣ್ಣಂದಿರ ಸಾವಿಗೆ ವೈದ್ಯರ ನಿರ್ಲಕ್ಷ್ಯ ಕಾರಣ ಎಂದು‌ ಮೃತರ ಸಹೋದರ ನವೀನ್ ಆರೋಪ ಮಾಡಿದ್ದಾರೆ.

ABOUT THE AUTHOR

...view details