ಮೈಸೂರು:ಅನುಮಾನಾಸ್ಪದ ರೀತಿಯಲ್ಲಿ ವ್ಯಕ್ತಿಯ ಶವ ಮತ್ತು ಆತನ ಬೈಕ್ ನಾಲೆಯಲ್ಲಿ ಪತ್ತೆಯಾಗಿರುವ ಘಟನೆ ನಂಜನಗೂಡು ತಾಲೂಕಿನ ಹರತಲೆ ಬಳಿ ನಡೆದಿದೆ.
ನಾಲೆಯಲ್ಲಿ ವ್ಯಕ್ತಿಯ ಶವ, ಬೈಕ್ ಪತ್ತೆ: ಕೊಲೆ ಶಂಕೆ - ಮೈಸೂರು
ನಂಜನಗೂಡು ತಾಲೂಕಿನ ಹರತಲೆ ರಸ್ತೆಯ ನುಗು ನಾಲೆಯಲ್ಲಿ ಅನುಮಾನಾಸ್ಪದವಾಗಿ ವ್ಯಕ್ತಿಯ ಶವ ಮತ್ತು ಆತನ ಬೈಕ್ ಪತ್ತೆಯಾಗಿದೆ.
ನಾಲೆಯಲ್ಲಿ ವ್ಯಕ್ತಿಯ ಶವ ಪತ್ತೆ : ಕೊಲೆ ಶಂಕೆ..?
ಮೃತನನ್ನು ರಮೇಶ್ (22) ಎಂದು ಗುರುತಿಸಲಾಗಿದೆ. ಈತ ಹೆಚ್.ಡಿ.ಕೋಟೆ ತಾಲೂಕಿನ ಹಳ್ಳದ ಮನುಗನಹಳ್ಳಿ ಗ್ರಾಮದವನಾಗಿದ್ದು, ಅನುಮಾನಾಸ್ಪದವಾಗಿ ನಂಜನಗೂಡು ತಾಲೂಕಿನ ಹರತಲೆ ರಸ್ತೆಯ ನುಗು ನಾಲೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಅಲ್ಲದೆ ಈತನ ದ್ವಿಚಕ್ರ ವಾಹನ ಕೂಡ ನಾಲೆಯಲ್ಲಿ ಬಿದ್ದಿದೆ. ವಿಷಯ ತಿಳಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಸದ್ಯ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿದ್ದಾರೆ.