ಮೈಸೂರು:ದೇಶದರಾಷ್ಟ್ರೀಯ ಪಕ್ಷಿ ನವಿಲನ್ನು ಹಿಡಿದುಕೊಂಡು ಬಂದು ಮನೆಯಲ್ಲಿ ಸಾಕುತ್ತಿದ್ದ ವ್ಯಕ್ತಿಯನ್ನು ಅರಣ್ಯ ಸಂಚಾರಿ ದಳದ ಪೊಲೀಸರು ಬಂಧಿಸಿದ್ದಾರೆ. ಮೈಸೂರು ತಾಲೂಕಿನ ಹನಗೂಡು ಹೋಬಳಿಯ ಕಾಮಗೌಡನ ಹಳ್ಳಿಯ ಮಂಜು ಎಂಬಾತನೆ ಬಂಧಿತ ಆರೋಪಿಯಾಗಿದ್ದಾನೆ.
ಈತ ಕಾಡಂಚಿನ ಜಮೀನುಗಳಿಗೆ ಬರುವ ನವಿಲುಗಳನ್ನು ಹಿಡಿದು ಮನೆಯಲ್ಲಿ ಸಾಕುತ್ತಿದ್ದಾನೆ ಎಂಬ ಮಾಹಿತಿ ಪಡೆದ ಅರಣ್ಯ ಸಂಚಾರಿ ದಳದ ಎಸ್ಐ ಲಕ್ಷ್ಮಿ ನೇತೃತ್ವದ ತಂಡ ದಾಳಿ ನಡೆಸಿದೆ. ಈ ಸಂದರ್ಭದಲ್ಲಿ ಮನೆಯಲ್ಲಿ ನವಿಲು ಪತ್ತೆಯಾಗಿದ್ದು, ತಕ್ಷಣ ಆರೋಪಿಯನ್ನು ಬಂಧಿಸಿದ್ದಾರೆ.