ಕರ್ನಾಟಕ

karnataka

ETV Bharat / state

ರಾಜ್ಯಕ್ಕೆ ಮಲ್ಲಿಕಾರ್ಜುನ ಖರ್ಗೆ ಮುಂದಿನ ಸಿಎಂ: ಧ್ರುವ ನಾರಾಯಣ್ ಭವಿಷ್ಯ - ಮಾಜಿ ಸಂಸದ ಧ್ರುವ ನಾರಾಯಣ್

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಮಾಪ್ತರಾದ ಮಾಜಿ ಸಂಸದ ಧ್ರುವ ನಾರಾಯಣ್ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನ ಬೆಂಬಲಿಸಿ ಮಾತನಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಖರ್ಗೆ ಅವರನ್ನು ಮುಂದಿನ ಸಿಎಂ ಆಗಿ ಮಾಡಲು ತಮ್ಮ ಸಮುದಾಯದವರಿಗೆ ಅವರು ಕರೆ ನೀಡಿದ್ದಾರೆ.

ಧ್ರುವ ನಾರಾಯಣ್

By

Published : Oct 31, 2019, 5:39 PM IST

ಮೈಸೂರು:ಮಲ್ಲಿಕಾರ್ಜುನ ಖರ್ಗೆ ನಮ್ಮ ಹಿರಿಯ ಅಣ್ಣ. ಅವರು ದೊಡ್ಡ ಸ್ಥಾನದಲ್ಲಿದ್ದು, ಅವರಿಗೆ ನಾವೆಲ್ಲ ಬಲ ತುಂಬಿದರೆ ಮುಂದೆ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗೆದ್ದರೆ ಖರ್ಗೆಯವರನ್ನು ಮುಖ್ಯಮಂತ್ರಿಯ‌ನ್ನಾಗಿ ಮಾಡುವ ಅವಕಾಶ ಇದೆ ಎಂದು ಮಾಜಿ ಸಂಸದ ಧ್ರುವ ನಾರಾಯಣ್ ಹೇಳಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಅಗಿದೆ.

ಧ್ರುವ ನಾರಾಯಣ್, ಮಾಜಿ ಸಂಸದ

ಹುಣಸೂರು ಉಪಚುನಾವಣೆಯ ಸಂಬಂಧ ಕರೆದಿದ್ದ ದಲಿತ ಸಂಘಟನೆಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಮಾಪ್ತರಾದ ಧ್ರುವ ನಾರಾಯಣ್ ಈ ಮಾತನ್ನು ಹೇಳಿದ್ದಾರೆ. ದಲಿತರಿಗೆ ಆಧ್ಯತೆ ಇಲ್ಲ, ನಮ್ಮಲ್ಲಿ ಎಷ್ಟು ಜನ ಇದ್ದರೂ ಅವರನ್ನು ಸಚಿರನ್ನಾಗಿ ಮಾಡಿಲ್ಲ. ಕಾಂಗ್ರೆಸ್‌ನಲ್ಲಿ ದಲಿತರಿಗೆ ಉನ್ನತ ಸ್ಥಾನ ನೀಡಲಾಗಿದೆ. ಈಗ ರಾಜ್ಯದಲ್ಲಿ ನಡೆಯುವ ಉಪಚುನಾವಣೆಯಲ್ಲಿ ದಲಿತ ಸಂಘಟನೆಗಳು ಹಾಗೂ ದಲಿತರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಕರೆ ನೀಡಿದ್ದಾರೆ.

ABOUT THE AUTHOR

...view details