ಕರ್ನಾಟಕ

karnataka

ETV Bharat / state

ಎಲ್​ಇಡಿ ಡಿಸ್​ಪ್ಲೇ ಮೂಲಕ ಕೊರೊನಾ ಅರಿವು ಮೂಡಿಸಿ: ತನ್ವೀರ್ ಸೇಠ್​

ರ‍್ಯಾಪಿಡ್ ಟೆಸ್ಟ್ ನಡೆಯುವ ಪ್ರದೇಶಗಳ ಬಗ್ಗೆ ಹಾಗೂ ಯಾರು ಕೋವಿಡ್ ಟೆಸ್ಟ್​ಗೆ ಒಳಗಾಗಬೇಕು ಎಂಬ ಮಾಹಿತಿಯನ್ನು ಮುಂಚಿತವಾಗಿ ಆಟೋಗಳ ಮೂಲಕ ಹಾಗೂ ಮಸೀದಿ, ದೇವಸ್ಥಾನ ಮತ್ತು ಚರ್ಚ್​ ಮೂಲಕ ಅರಿವು ಮೂಡಿಸಿ ಎಂದು ಶಾಸಕ ತನ್ವೀರ್ ಸೇಠ್ ಹೇಳಿದರು.

ಶಾಸಕ ತನ್ವೀರ್ ಸೇಠ್

By

Published : Jul 28, 2020, 6:18 AM IST

ಮೈಸೂರು: ಕೊರೊನಾ ಸೋಂಕಿತರ ಸಂಖ್ಯೆ ಹಾಗೂ ಸಾವಿನ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಶಾಸಕ ತನ್ವೀರ್ ಸೇಠ್ ಅವರು ತಮ್ಮ ಎನ್.ಆರ್.ಕ್ಷೇತ್ರದ ವ್ಯಾಪ್ತಿಯ ಅಧಿಕಾರಿಗಳೊಂದಿಗೆ ದಿನವಿಡೀ ಸಭೆ ನಡೆಸಿದ್ದಾರೆ.

ಜನರಲ್ಲಿನ ಆತಂಕ‌ ಮತ್ತು ಭಯ ನಿವಾರಣೆ ಮಾಡಲು ಫೇಸ್​ಬುಕ್, ವಾಟ್ಸ್ಆ್ಯಪ್ ಮತ್ತು ನಗರ ಪಾಲಿಕೆ ವ್ಯಾಪ್ತಿಯ ಸರ್ಕಲ್​ಗಳಲ್ಲಿ ಎಲ್​ಇಡಿ ಡಿಸ್​ಪ್ಲೇ ಗಳಲ್ಲಿ ಮನೋವೈದ್ಯರಿಂದ 5 ರಿಂದ 10 ನಿಮಿಷ ವಿಡಿಯೋ ಪ್ರಸಾರದ ಮೂಲಕ ಧೈರ್ಯ ತುಂಬುವಂತೆ ಸಲಹೆ ನೀಡಿದರು.

ತನ್ವೀರ್ ಸೇಠ್​ ಸಭೆ

ರ‍್ಯಾಪಿಡ್ ಟೆಸ್ಟ್ ನಡೆಯುವ ಪ್ರದೇಶಗಳ ಬಗ್ಗೆ ಹಾಗೂ ಯಾರು ಕೋವಿಡ್ ಟೆಸ್ಟ್​ಗೆ ಒಳಗಾಗಬೇಕು ಎಂಬ ಮಾಹಿತಿಯನ್ನು ಮುಂಚಿತವಾಗಿ ಆಟೋಗಳ ಮೂಲಕ ಹಾಗೂ ಮಸೀದಿ, ದೇವಸ್ಥಾನ ಮತ್ತು ಚರ್ಚ್​ ಮೂಲಕ ಅರಿವು ಮೂಡಿಸಿ ಎಂದು ಹೇಳಿದರು.

ಎನ್‌.ಆರ್. ಕ್ಷೇತ್ರ ವ್ಯಾಪ್ತಿಯ ಮೆಡಿಕಲ್ ಸ್ಟೋರ್​ಗಳಲ್ಲಿ ಜ್ವರ ಮತ್ತು ಕೋವಿಡ್ ಲಕ್ಷಣಗಳಿಗೆ ಸಂಬಂಧಿಸಿದಂತೆ ಔಷಧಿಗಳನ್ನು ಪಡೆಯುವ ಜನರ ಮಾಹಿತಿಯನ್ನು ರಿಜಿಸ್ಟರ್ ಮಾಡಿಕೊಳ್ಳಲು ಮೆಡಿಕಲ್ ಶಾಪ್​ಗೆ ಅಧಿಕಾರಿಗಳು ಸೂಚಿಸಬೇಕು ಎಂದರು.

ನಕಲಿ ವೈದ್ಯರನ್ನು ಪಟ್ಟಿ ಮಾಡಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕೋವಿಡ್ ಕೇರ್​ಗಳಲ್ಲಿ ಟೆಸ್ಟ್ ಪ್ರಮಾಣ ಹೆಚ್ಚಿಸಬೇಕು ಎಂದು ಸೂಚಿಸಿದರು.

ABOUT THE AUTHOR

...view details