ಮೈಸೂರು: ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಮಾವುತರು ಮತ್ತು ಕಾವಾಡಿಗರು ದುಬಾರೆ ಆನೆ ಶಿಬಿರದಲ್ಲಿ ಸಭೆ ಸೇರಿ ದಸರಾ ಬಹಿಷ್ಕರಿಸುವುದಾಗಿ ಬೆದರಿಕೆ ಹಾಕಿದ್ದಾರೆ. ವೇತನ ತಾರತಮ್ಯ ಸೇರಿದಂತೆ ಮೂಲ ಸೌಕರ್ಯ ಒದಗಿಸುವ ಕುರಿತು ಹಲವು ವರ್ಷಗಳಿಂದ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಂಘದ ಸದಸ್ಯರು ದೂರಿದ್ದಾರೆ.
ದಸರಾ ಬಹಿಷ್ಕರಿಸಲು ಮಾವುತ-ಕಾವಾಡಿಗರ ಸಂಘದ ನಿರ್ಧಾರ - Mahout team decided to bycott dasara at Mysore
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಹಲವು ವರ್ಷಗಳಿಂದ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಮಾವುತರು ಮತ್ತು ಕಾವಾಡಿಗಳ ಸಂಘದ ಸದಸ್ಯರು ದೂರಿದ್ದಾರೆ.

ದಸರಾ ಬಹಿಷ್ಕರಿಸಲು ಮಾವುತ-ಕಾವಾಡಿಗರ ಸಂಘದಿಂದ ನಿರ್ಧಾರ
ಈ ಬಾರಿ ಸಾಕಾನೆಗಳನ್ನು ಕಳುಹಿಸದೆ ದಸರಾ ಬಹಿಷ್ಕರಿಸಿ ಪ್ರತಿಭಟನೆ ನಡೆಸಲಾಗುವುದು. ನಿಯೋಜಿತ ಶಿಬಿರಗಳಲ್ಲಿ ಆನೆಗಳ ನಿರ್ವಹಣೆ ಬಿಟ್ಟು ಹುಲಿ ಹಿಡಿಯುವುದು, ಕಾಡಾನೆ ಹಿಡಿಯುವ ಕೆಲಸಗಳಿಗೆ ಕೈ ಹಾಕದಂತೆ ಸಂಘ ತೀರ್ಮಾನಿಸಿದೆ. ಮುಖ್ಯಮಂತ್ರಿಗಳು ಲಿಖಿತ ಭರವಸೆ ನೀಡಿದರೆ ಎಂದಿನಂತೆ ಕೆಲಸ ನಿರ್ವಹಿಸುತ್ತೇವೆ ಎಂದು ಸಂಘದ ಮೇಘರಾಜ್ ತಿಳಿಸಿದರು.
ಇದನ್ನೂ ಓದಿ:ಹಂತಕರನ್ನು ಆ. 5ರೊಳಗೆ ಬಂಧಿಸದಿದ್ದಲ್ಲಿ ಸತ್ಯಾಗ್ರಹ.. ಸರ್ಕಾರಕ್ಕೆ ಕುಮಾರಸ್ವಾಮಿ ಡೆಡ್ಲೈನ್