ಕರ್ನಾಟಕ

karnataka

ETV Bharat / state

ಮೈಸೂರು: ಮಾವುತರು-ಕಾವಾಡಿಗಳ ಕೊರೊನಾ ವರದಿ ನೆಗೆಟಿವ್ - ಮೈಸೂರು ಅಪ್ಡೇಟ್‌

ಅರಣ್ಯ ಇಲಾಖೆ ಸಿಬ್ಬಂದಿ ಸೇರಿದಂತೆ 24 ಮಂದಿಗೆ ಕೊರೊನಾ ಪರೀಕ್ಷೆ ಮಾಡಲಾಗಿತ್ತು. ಎಲ್ಲರ ವರದಿ ನೆಗೆಟಿವ್ ಬಂದಿರುವುದರಿಂದ ಅರಣ್ಯ ಇಲಾಖೆ ಹಾಗೂ ಮಾವುತರು, ಕಾವಾಡಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

Mahout Covid Report Negative
ಮಾವುತರು-ಕಾವಾಡಿಗಳ ಕೊರೊನಾ ವರದಿ ನೆಗೆಟಿವ್

By

Published : Oct 4, 2020, 2:13 PM IST

ಮೈಸೂರು: ದಸರಾ ಯಶಸ್ವಿ ರೂವಾರಿಗಳಾದ ಮಾವುತರು-ಕಾವಾಡಿಗಳ ಕೊರೊನಾ ವರದಿ ನೆಗೆಟಿವ್ ಬಂದಿರುವುದರಿಂದ ಅರಣ್ಯ ಇಲಾಖೆ ನಿಟ್ಟುಸಿರು ಬಿಟ್ಟಿದೆ.

ಮಾವುತರು-ಕಾವಾಡಿಗಳ ಕೊರೊನಾ ವರದಿ ನೆಗೆಟಿವ್

ದಸರಾದಲ್ಲಿ ಪಾಲ್ಗೊಳ್ಳುತ್ತಿರುವ ಪ್ರತಿಯೊಬ್ಬರು ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಬೇಕು ಎನ್ನುವ ಜಿಲ್ಲಾಡಳಿತ ನಿರ್ಧಾರದ ಹಿನ್ನೆಲೆಯಲ್ಲಿ, ಶನಿವಾರ ಐದು ಆನೆಗಳ ಮಾವುತರು, ಕಾವಾಡಿಗಳು, ಅರಣ್ಯ ಇಲಾಖೆ ಸಿಬ್ಬಂದಿ ಸೇರಿದಂತೆ 24 ಮಂದಿಗೆ ಕೊರೊನಾ ಪರೀಕ್ಷೆ ಮಾಡಲಾಗಿತ್ತು. ಎಲ್ಲರ ವರದಿ ನೆಗೆಟಿವ್ ಬಂದಿರುವುದರಿಂದ ಅರಣ್ಯ ಇಲಾಖೆ ಹಾಗೂ ಮಾವುತರು, ಕಾವಾಡಿಗಳು ಕೂಡ ನಿರಾಳರಾಗಿದ್ದಾರೆ.

ABOUT THE AUTHOR

...view details