ಮೈಸೂರು:ಚಾಮುಂಡೇಶ್ವರಿ ಬೆಟ್ಟ ಹಾಗೂ ಪುರಭವನದಲ್ಲಿ ಮಹಿಷ ದಸರಾ ಆಚರಣೆಗೆ ಅವಕಾಶ ಸಿಗದ ಹಿನ್ನೆಲೆಯಲ್ಲಿ ಸಂಸದ ಪ್ರತಾಪಸಿಂಹ ವಿರುದ್ಧ ಮಹಿಷ ದಸರಾ ಆಚರಣಾ ಸಮಿತಿ ಸದಸ್ಯರು ಕಿಡಿಕಾರಿದ್ದಾರೆ.
ಮಹಿಷ ದಸರಾ ಆಚರಣೆಗೆ ಸಿಗದ ಅವಕಾಶ: ಪ್ರತಾಪಸಿಂಹ ವಿರುದ್ಧ ಪ್ರಗತಿಪರರು ಕೆಂಡಾಮಂಡಲ - ಚಾಮುಂಡೇಶ್ವರಿ ಬೆಟ್ಟ
ಮಹಿಷ ದಸರಾ ಆಚರಣಾ ಸಮಿತಿಯಿಂದ ಚಾಮುಂಡೇಶ್ವರಿ ಬೆಟ್ಟದಲ್ಲಿರುವ ಮಹಿಷನ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಹಾಗೂ ಪುರಭವನದಿಂದ ಮೆರವಣಿಗೆ ನಡೆಸಲು ಕೆಲ ದಿನಗಳ ಹಿಂದೆ ನೀಡಿದ್ದ ಅವಕಾಶಕ್ಕೆ ತಡೆಯೊಡ್ಡಿರುವುದಕ್ಕೆ ಪ್ರಗತಿಪರರು ಕೆಂಡಾಮಂಡಲವಾಗಿದ್ದಾರೆ. ಸಂಸದ ಪ್ರತಾಪ ಸಿಂಹ ವಿರುದ್ಧವೂ ಆಕ್ರೋಶ ವ್ಯಕ್ತವಾಗಿದೆ.
ಮಹಿಷ ದಸರಾ ಆಚರಣೆಗೆ ಸಿಗದ ಅವಕಾಶ
ಮಹಿಷ ದಸರಾ ಆಚರಣಾ ಸಮಿತಿಯಿಂದ ಚಾಮುಂಡೇಶ್ವರಿ ಬೆಟ್ಟದಲ್ಲಿರುವ ಮಹಿಷನ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಹಾಗೂ ಪುರಭವನದಿಂದ ಮೆರವಣಿಗೆ ನಡೆಸಲು ಕೆಲ ದಿನಗಳ ಹಿಂದೆ ಪೊಲೀಸ್ ಇಲಾಖೆ ಅವಕಾಶ ನೀಡಿತ್ತು.
ಆದರೆ, ಗುರುವಾರ ಚಾಮುಂಡೇಶ್ವರಿ ಬೆಟ್ಟಕ್ಕೆ ತೆರಳಿದ್ದ ಸಂಸದ ಪ್ರತಾಪಸಿಂಹ, ಮಹಿಷ ದಸರಾವನ್ನು ಇಲ್ಲಿ ಆಚರಿಸಬಾರದು. ಅದಕ್ಕೆ ಅನುಮತಿ ಕೂಡ ನೀಡಬಾರದು ಎಂದು ಪೊಲೀಸರಿಗೆ ತಾಕೀತು ಮಾಡಿದ್ದರು. ಇದರಿಂದ ಇಂದು ಚಾಮುಂಡಿ ಬೆಟ್ಟದಲ್ಲಿ ನಿಷೇಧಾಜ್ಞೆ ಸಹ ಜಾರಿ ಮಾಡಲಾಗಿದೆ. ಇದರಿಂದ ಮಹಿಷ ದಸರಾ ಆಚರಣೆ ಸಮಿತಿ ಸದಸ್ಯರು ಕೆಂಡಾಮಂಡಲವಾಗಿದ್ದಾರೆ.