ಕರ್ನಾಟಕ

karnataka

ETV Bharat / state

ಮೀರಾ, ಮುತಾಲಿಕ್‌ ಹಿಂದೂ ಧರ್ಮ ರಕ್ಷಕರಲ್ಲ, ಬ್ರಾಹ್ಮಣ್ಯದ ಆರಾಧಕರಷ್ಟೇ.. ಪ್ರೊ. ಮಹೇಶ್ಚಂದ್ರ ಗುರು - ಪ್ರಗತಿಪರ ಚಿಂತಕ ಪ್ರೊ.ಮಹೇಶ್ ಚಂದ್ರಗುರು ಆಕ್ರೋಶ

ಮೀರಾ ರಾಘವೇಂದ್ರ ಅವರು ಪರ್ಮನೆಂಟ್ ಬಲಪಂಥೀಯ ರಾಜಕಾರಣದ ಖಳನಾಯಕಿ. ಇವರನ್ನು ವಕೀಲರ ವೃತಿಯಿಂದ ವಜಾಗೊಳಿಸಬೇಕು..

maheshchandra guru outrage against pramod muthalik
ಮೈಸೂರು

By

Published : Feb 5, 2021, 2:12 PM IST

ಮೈಸೂರು: ಹಿಂದುತ್ವ ರಕ್ಷಕರೆನಿಸಿಕೊಂಡಿರುವ ಪ್ರಮೋದ್ ಮುತಾಲಿಕ್ ಸೇರಿದಂತೆ ಇತರರು‌ ಯಾರು ಹಿಂದೂ ರಕ್ಷಕರಲ್ಲ. ಇವರೆಲ್ಲ ಹಿಂದೂ ಧರ್ಮಕ್ಕೆ ಕಳಂಕಪ್ರಾಯರು ಎಂದು ಪ್ರಗತಿಪರ ಚಿಂತಕ ಪ್ರೊ.ಮಹೇಶ್ ಚಂದ್ರಗುರು ಕಿಡಿಕಾರಿದ್ದಾರೆ.

ದಸಂಸ ಸಂಘಟನೆಯಿಂದ ಪುರಭವನದ ಮುಂಭಾಗದಲ್ಲಿರುವ ಡಾ. ಬಿ ಆರ್‌ ಅಂಬೇಡ್ಕರ್ ಪ್ರತಿಮೆ ಮುಂದೆ ಪ್ರತಿಭಟನೆ ಸ್ಥಳದಲ್ಲಿ ಭಾಗಿಯಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇವರಿಗೆ ಬೇಕಾಗಿರುವುದು ಹಿಂದೂ ಧರ್ಮವಲ್ಲ, ಬ್ರಾಹ್ಮಣ ಧರ್ಮ.

ಪ್ರಗತಿಪರ ಚಿಂತಕ ಪ್ರೊ. ಮಹೇಶ್‌ ಚಂದ್ರಗುರು ನೇತೃತ್ವದಲ್ಲಿ ಪ್ರತಿಭಟನೆ..

ಬ್ರಾಹ್ಮಣ್ಯದ ರಕ್ಷಣೆ ಮಾಡಿಕೊಳ್ಳುವುದು ಇವರ ಅಜೆಂಡಾ. ಶ್ರೀರಾಮಸೇನೆ ಸೇರಿ ಹಲವು ಸೇನೆಗಳು, ಸಂವಿಧಾನ ವಿರೋಧಿಗಳು. ಇವರು ವಿದೇಶದಿಂದ ಬರುವ ಹಣದಿಂದ ಸಂಘಟನೆ ನಡೆಸುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.

ಮೀರಾ ರಾಘವೇಂದ್ರ ಅವರು ಪರ್ಮನೆಂಟ್ ಬಲಪಂಥೀಯ ರಾಜಕಾರಣದ ಖಳನಾಯಕಿ. ಇವರನ್ನು ವಕೀಲರ ವೃತಿಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ABOUT THE AUTHOR

...view details