ಮೈಸೂರು:ಯುದ್ಧದಲ್ಲಿ ಕರ್ಣನಿಗೆ ಮೋಸದಿಂದ ಅರ್ಜುನ ಬಾಣ ಬಿಟ್ಟಂತೆ ಅಸಹಾಯಕರ ಮೇಲೆ ರಾಜ್ಯ ಸರ್ಕಾರ ಬಾಣ ಬಿಡುತ್ತಿದೆ ಎಂದು ಮಾಜಿ ಸಚಿವ ಡಾ. ಹೆಚ್.ಸಿ.ಮಹದೇವಪ್ಪ ಹರಿಹಾಯ್ದರು.
ಅಸಹಾಯಕರ ಮೇಲೆ ಸರ್ಕಾರ ಬಾಣ ಬಿಡುತ್ತಿದೆ: ಹೆಚ್.ಸಿ.ಮಹದೇವಪ್ಪ
ವಸಾಹತುಶಾಹಿಗಳಿಗೆ, ಬಿಲ್ಡರ್ಸ್, ಹಣವಂತರಿಗೆ ಭೂಮಿ ನೀಡುವ ಉದ್ದೇಶದಿಂದ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮಾಡಲಾಗಿದೆ. ದಲಿತ ಸಂಘಟನೆಗಳು ಹಾಗೂ ದಲಿತ ಸಂಘಟನೆಗಳ ಹೋರಾಟ ನಶಿಸಿ ಹೋಗುತ್ತಿದೆ ಎಂದು ಮಾಜಿ ಸಚಿವ ಡಾ. ಹೆಚ್.ಸಿ.ಮಹದೇವಪ್ಪ ಅಸಮಾಧಾನ ಹೊರ ಹಾಕಿದರು.
ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕೊರೊನಾ ವ್ಯಾಪಾಕವಾಗಿ ಹರಡುತ್ತಿದೆ. ಇದರ ನಿರ್ವಹಣೆಗೆ ಹೆಚ್ಚಿನ ಗಮನ ಕೊಡುತ್ತಿಲ್ಲ. ಪ್ರವಾಹದಿಂದ ತತ್ತರಿಸಿರುವ ಜನರಿಗೆ ಅನುಕೂಲ ಮಾಡಿಕೊಡದೇ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು, ಅಸಹಾಯಕರ ಮೇಲೆ ದೌರ್ಜನ್ಯ ಮಾಡಲು ಹೊರಟಿದೆ ಎಂದು ಕಿಡಿಕಾರಿದರು.
ಎಪಿಎಂಸಿ, ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಜಾರಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒಬ್ಬರ ತೀರ್ಮಾನವಲ್ಲ. ಅವರ ಹಿಂದೆ ಸಾಕಷ್ಟು ಕೈಗಳಿವೆ ಎಂದರು.
Last Updated : Jun 25, 2020, 5:52 PM IST